ರಶ್ಯ-ಉಕ್ರೇನ್ ಯುದ್ಧದ ಕುರಿತು ಭಾರತದ ನಿಲುವನ್ನು ಟೀಕಿಸಿದಕ್ಕೆ ಈಗಲೂ ಅವಮಾನ ಪಡುತ್ತಿದ್ದೇನೆ: ಶಶಿ ತರೂರ್

Update: 2025-03-20 15:55 IST
Shashi Tharoor

ಶಶಿ ತರೂರ್ | PC : PTI 

  • whatsapp icon

ಹೊಸ ದಿಲ್ಲಿ: “2022ರಲ್ಲಿ ರಶ್ಯ-ಉಕ್ರೇನ್ ನಡುವೆ ಪ್ರಾರಂಭಗೊಂಡ ಯುದ್ಧದ ಕುರಿತು ಭಾರತ ತಳೆದ ತಟಸ್ಥ ನಿಲುವನ್ನು ವಿರೋಧಿಸಿದ್ದಕ್ಕೆ ಈಗಲೂ ಅವಮಾನ ಪಡುತ್ತಿದ್ದೇನೆ” ಎಂದು ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಹೇಳಿದ್ದಾರೆ.

ಜಾಗತಿಕ ರಾಜಕೀಯದ ಕುರಿತು ನಡೆಯುತ್ತಿರುವ ರೈಸಿನಾ ಮಾತುಕತೆಯಲ್ಲಿ 'ಶಾಂತಿಯ ಅನುಷ್ಠಾನ: ಭವಿಷ್ಯದತ್ತ ನೋಡಲು ಹಿನ್ನೋಟ' ಎಂಬ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ತಿರುವನಂತಪುರಂ ಸಂಸದರೂ ಆದ ಶಶಿ ತರೂರ್, ʼರಶ್ಯ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಭಾರತ ತಳೆದ ತಟಸ್ಥ ನಿಲುವು, ದೀರ್ಘಕಾಲದ ಶಾಂತಿ ಸ್ಥಾಪಿಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದೆʼ ಎಂದು ಅಭಿಪ್ರಾಯ ಪಟ್ಟರು.

"ಫೆಬ್ರವರಿ 2022ರಲ್ಲಿ ನಡೆದಿದ್ದ ಸಂಸದೀಯ ಚರ್ಚೆಯ ವೇಳೆ ರಶ್ಯ-ಉಕ್ರೇನ್ ಯುದ್ಧದ ಕುರಿತು ಭಾರತ ತಳೆದಿದ್ದ ತಟಸ್ಥ ನಿಲುವನ್ನು ಟೀಕಿಸಿದ್ದ ವ್ಯಕ್ತಿ ನಾನೊಬ್ಬನೇ ಆಗಿದ್ದೆ. ಹಾಗಾಗಿ, ಅದರಿಂದಾಗಿರುವ ಅವಮಾನದ ಗುರುತನ್ನು ನಾನೀಗಲೂ ಒರೆಸಿಕೊಳ್ಳುತ್ತಾ ಇದ್ದೇನೆ" ಎಂದು ಅವರು ಒಪ್ಪಿಕೊಂಡಿದ್ದಾರೆ.

ಉಕ್ರೇನ್ ಮೇಲೆ ರಶ್ಯ ಯುದ್ಧ ಸಾರಿದಾಗ, ರಶ್ಯ ಕ್ರಮವನ್ನು ಖಂಡಿಸಿದ್ದ ಶಶಿ ತರೂರ್, ವಿಶ್ವ ಸಂಸ್ಥೆಯ ಒಪ್ಪಂದವನ್ನು ಉಲ್ಲಂಘಿಸಿರುವ ರಶ್ಯದ ಆಕ್ರಮಣ ಮತ್ತು ಗಡಿ ಉಲ್ಲಂಘನೆಯನ್ನು ಭಾರತ ತಿರಸ್ಕರಿಸಬೇಕು ಹಾಗೂ ಉಕ್ರೇನ್‌ನ ಸಾರ್ವಭೌಮತೆಯನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದ್ದರು.

ಆದರೆ, ಮೂರು ವರ್ಷಗಳ ನಂತರ, ಉಕ್ರೇನ್-ರಶ್ಯ ಯುದ್ಧದ ಕುರಿತು ಭಾರತದ ರಾಜತಾಂತ್ರಿಕ ನಿಲುವನ್ನು ಪ್ರಶಂಸಿಸಿರುವ ಶಶಿ ತರೂರ್, ಈ ನಿಲುವಿನಿಂದಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಶ್ಯ ಹಾಗೂ ಉಕ್ರೇನ್ ಎರಡೂ ದೇಶಗಳ ನಡುವೆ ಯಾವುದೇ ಮುಜುಗರವಿಲ್ಲದೆ ಶಾಂತಿ ಮಾತುಕತೆ ನಡೆಸಲು ಅವಕಾಶ ದೊರೆತಿದೆ ಎಂದು ಹೇಳಿದ್ದಾರೆ.

"ಭಾರತ ತಳೆದ ಈ ನಿಲುವಿನಿಂದಾಗಿ, ಭಾರತದ ಪ್ರಧಾನಿಯು ಕೇವಲ ಎರಡೇ ವಾರಗಳ ಅಂತರದಲ್ಲಿ ರಶ್ಯ ಹಾಗೂ ಉಕ್ರೇನ್ ಅಧ್ಯಕ್ಷರಿಬ್ಬರನ್ನೂ ಆಲಂಗಿಸಲು ಸಾಧ್ಯವಾಗಿದ್ದು, ಇಬ್ಬರೂ ಅವರನ್ನು ಅಂಗೀಕರಿಸಲು ಸಾಧ್ಯವಾಗಿದ್ದು ಸ್ಪಷ್ಟವಾಗಿದೆ" ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಭಾರತವು ಯೂರೋಪ್ ಭೌಗೋಳಿಕತೆಯಿಂದ ತುಂಬಾ ದೂರವಿರುವುದರಿಂದ ಹಾಗೂ ಸುದೀರ್ಘ ಕಾಲದಿಂದ ಅದರಿಂದ ತಟಸ್ಥ ನಿಲುವು ಕಾಯ್ದುಕೊಂಡಿರುವುದರಿಂದ, ಭಾರತಕ್ಕೆ ಪ್ರಮುಖ ಸಂಧಾನಕಾರನ ಸ್ಥಾನದಲ್ಲಿ ನಿಲ್ಲುವ ವಿಶ್ವಾಸಾರ್ಹತೆ ಪ್ರಾಪ್ತವಾಗಿದೆ ಎಂದೂ ಹೇಳಿದ ಶಶಿ ತರೂರ್, "ದೀರ್ಘಕಾಲೀನ ಶಾಂತಿ ಸ್ಥಾಪನೆಯನ್ನು ಮಾಡುವಂತಹ ಕೆಲವೇ ದೇಶಗಳಿಗೆ ಸಾಧ್ಯವಾಗಬಹುದಾದ ಸ್ಥಾನದಲ್ಲಿ ಭಾರತ ನಿಂತಿದೆ" ಎಂದು ಹೇಳಿದ್ದಾರೆ.

2022ರಿಂದ ರಶ್ಯ ಹಾಗೂ ಉಕ್ರೇನ್ ನಡುವೆ ಪ್ರಾರಂಭಗೊಂಡಿದ್ದ ಯುದ್ಧವು ಇಂದಿಗೂ ಮುಂದುವರಿದಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾಗೂ ಜೀವಹಾನಿಗೆ ಕಾರಣವಾಗಿದೆ. ಈ ವೇಳೆ, ರಶ್ಯ-ಉಕ್ರೇನ್ ನಡುವಿನ ಯುದ್ಧದ ಕುರಿತು ಭಾರತ ತಳೆದಿದ್ದ ತಟಸ್ಥ ನಿಲುವಿನ ಕುರಿತು ಭಾರತದಲ್ಲಿಯೇ ಕೆಲವು ವಲಯಗಳಿಂದ ಟೀಕೆಗೆ ಗುರಿಯಾಗಿತ್ತು. ಈ ಪೈಕಿ ಶಶಿ ತರೂರ್ ಕೂಡಾ ಸೇರಿದ್ದರು. ಬಿಹಾರ | ʼನಳ್ಳಿ ನೀರಿʼನ ವಿಚಾರಕ್ಕೆ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಸೋದರಳಿಯರ ನಡುವೆ ಗುಂಡಿನ ಚಕಮಕಿ : ಓರ್ವ ಮೃತ್ಯು, ಇಬ್ಬರಿಗೆ ಗಾಯ

ಪಾಟ್ನಾ: ಬಿಹಾರದ ಗ್ರಾಮವೊಂದರಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಅವರ ಇಬ್ಬರು ಸೋದರಳಿಯರ ನಡುವೆ ʼನಳ್ಳಿ ನೀರಿʼನ ವಿಚಾರಕ್ಕೆ ನಡೆದ ವಾಗ್ವಾದವು ತಾರಕಕ್ಕೇರಿ ಗುಂಡಿನ ಚಕಮಕಿ ನಡೆದಿದೆ. ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾಗಲ್ಪುರ ಸಮೀಪದ ನೌಗಾಚಿಯಾದ ಜಗತ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಶ್ವಜಿತ್ ಮತ್ತು ಜಯಜಿತ್ ಯಾದವ್ ನಡುವೆ ಗುಂಡಿನ ಚಕಮಕಿ ನಡೆದಿದೆ.

ನೌಗಾಚಿಯಾ ಎಸ್ಪಿ ಪ್ರೇರಣಾ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಸಹೋದರರು ನಳ್ಳಿ ನೀರಿನ ವಿಷಯದಲ್ಲಿ ಗಲಾಟೆ ಮಾಡಿಕೊಂಡಿಕೊಂಡು ಪರಸ್ಪರ ಗುಂಡಿನ ದಾಳಿ ನಡೆಸಿದರು. ಈ ವೇಳೆ ಅವರ ತಾಯಿ ಮಧ್ಯಪ್ರವೇಶಿಸಲು ಪ್ರಯತ್ನಿಸಿದರು. ವಿಶ್ವಜಿತ್ ಸ್ಥಳದಲ್ಲೇ ಮೃತಪಟ್ಟರು. ಜಯಜಿತ್ ಮತ್ತು ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಗ್ರಾಮಸ್ಥರ ಪ್ರಕಾರ, ಈ ಕುಟುಂಬವು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರ ಸಂಬಂಧಿಕರು. ಆದ್ದರಿಂದ ಪ್ರಕರಣವನ್ನು ಹೈ-ಪ್ರೊಫೈಲ್ ಪ್ರಕರಣ ಎಂದು ಪರಿಗಣಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News