ಐಎನ್‌ಎಲ್‌ಡಿ ಹರ್ಯಾಣ ವರಿಷ್ಠನ ಹತ್ಯೆ ಪ್ರಕರಣ: ಗೋವಾದಲ್ಲಿ ಇಬ್ಬರು ಆರೋಪಿಗಳ ಬಂಧನ

Update: 2024-03-04 08:31 GMT

Photo: @jhajjarpolice


ಚಂಡೀಗಢ/ಹೊಸದಿಲ್ಲಿ: ಐಎನ್‌ಎಲ್‌ಡಿ ಹರ್ಯಾಣ ನಾಯಕ ನಫೆ ಸಿಂಗ್ ರಾಠಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಗೋವಾದಲ್ಲಿ ಬಂಧಿಸಲಾಗಿದೆ.

ಫೆಬ್ರವರಿ 25ರಂದು ಝಜ್ಜರ್ ಜಿಲ್ಲೆಯ ಬಹದ್ದೂರ್ ಗಢದಲ್ಲಿ ಐಎನ್‌ಎಲ್‌ಡಿ ಹರ್ಯಾಣ ಘಟಕದ ಮುಖ್ಯಸ್ಥ ರಾಠಿ ಹಾಗೂ ಪಕ್ಷದ ಕಾರ್ಯಕರ್ತ ಜೈ ಕಿಶನ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಹಲವಾರು ಸುತ್ತಿನ ಗುಂಡಿನ ದಾಳಿ ನಡೆಸಿದ ನಂತರ ಅವರಿಬ್ಬರೂ ಮೃತಪಟ್ಟಿದ್ದರು.

ಹರ್ಯಾಣ ಪೊಲೀಸ್ ಇಲಾಖೆಯ ಜಿಲ್ಲಾ ಪೊಲೀಸ್ ವಿಶೇಷ ಕಾರ್ಯಪಡೆ ಹಾಗೂ ದಿಲ್ಲಿ ಪೊಲೀಸರ ವಿಶೇಷ ಘಟಕದ ಜಂಟಿ ಕಾರ್ಯಾಚರಣೆಯ ನೆರವಿನಿಂದ ಆರೋಪಿಗಳಾದ ಆಶಿಶ್ ಮತ್ತು ಸೌರಭ್ ಎಂಬವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಗೋವಾದ ಹೋಟೆಲ್ ಒಂದರಲ್ಲಿ ವಾಸ್ತವ್ಯ ಹೂಡಿದ್ದ ಅವರನ್ನು ಬಂಧಿಸಲಾಗಿದ್ದು, ಅವರನ್ನು ಇಂದು ಮಧ್ಯಾಹ್ನದ ಹೊತ್ತಿಗೆ ರಾಷ್ಟ್ರ ರಾಜಧಾನಿಗೆ ಕರೆ ತರಲಾಗುವುದು ಎಂದು ದಿಲ್ಲಿಯಲ್ಲಿ ಪೊಲೀಸರು ಹೇಳಿದ್ದಾರೆ.

ಫೆಬ್ರವರಿ 25ರಂದು ರಾಠಿ ಮತ್ತು ಕಿಶನ್ ಪ್ರಯಾಣಿಸುತ್ತಿದ್ದ ವಾಹನದ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಆಶಿಶ್, ಸೌರಭ್, ನಕುಲ್ ಮತ್ತು ಅತುಲ್ ಎಂಬ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ದಿಲ್ಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಹರ್ಯಾಣದಲ್ಲಿನ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರವು ರಾಠಿ ಅವರಿಗೆ ಜೀವ ಬೆದರಿಕೆ ಇದ್ದರೂ, ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಐಎನ್ಎಲ್ಡಿಯ ಹಿರಿಯ ನಾಯಕ ಅಭಯ್ ಸಿಂಗ್ ಚೌತಾಲಾ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News