Fact-check | ಜೆಪಿ ನಡ್ಡಾ ಅವರು ಸಂಸತ್ತಿನಲ್ಲಿ ಭಾರತದ ಸಂವಿಧಾನವನ್ನು ತಮ್ಮ ಪಾದದ ಪಕ್ಕದಲ್ಲಿ ಇಡಲಿಲ್ಲ

Update: 2025-02-18 17:38 IST
Editor : Ismail | Byline : logicallyfacts
Fact-check | ಜೆಪಿ ನಡ್ಡಾ ಅವರು ಸಂಸತ್ತಿನಲ್ಲಿ ಭಾರತದ ಸಂವಿಧಾನವನ್ನು ತಮ್ಮ ಪಾದದ ಪಕ್ಕದಲ್ಲಿ ಇಡಲಿಲ್ಲ

ಜೆಪಿ ನಡ್ಡಾ ಅವರು ರಾಜ್ಯಸಭೆಯಲ್ಲಿ ಸಂವಿಧಾನವನ್ನು ತಮ್ಮ ಪಾದದ ಪಕ್ಕದಲ್ಲಿ ಇಟ್ಟುಕೊಂಡಿರುವ ಎಂದು ಹಂಚಿಕೊಂಡ ಐಎನ್ ಸಿ ನಾಯಕರ ಎಕ್ಸ್ ಪೋಷ್ಟ್ ಗಳು. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

  • whatsapp icon

ತೀರ್ಪು (ತಪ್ಪು)

ವೀಡಿಯೋದ ದೀರ್ಘ ಆವೃತ್ತಯಲ್ಲಿ ಸಂವಿಧಾನವು ಅವರ ಕೈಯಿಂದ ಜಾರಿದಾಗ, ಅವರು ಅದನ್ನು ಎತ್ತಿಕೊಂಡು ಟೇಬಲ್ ಮೇಲೆ ಇಡುತ್ತಾರೆ ಎಂದು ತೋರಿಸುತ್ತದೆ.

ಹೇಳಿಕೆ ಏನು?

ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಮತ್ತು ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ (ಜೆಪಿ) ನಡ್ಡಾ ಅವರು ಸಂಸತ್ತಿನ ಮೇಲ್ಮನೆಯಲ್ಲಿ ಮಾತನಾಡುವ ವೀಡಿಯೋವನ್ನು ಹಂಚಿಕೊಂಡು ಅವರು ಭಾರತೀಯ ಸಂವಿಧಾನವನ್ನು "ತಮ್ಮ ಪಾದದ ಬಳಿ" ಇಟ್ಟುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವೀಡಿಯೋವನ್ನು ತೆಲಂಗಾಣ ಯುವ ಕಾಂಗ್ರೆಸ್‌ನ ಸದಸ್ಯ ಹಾಗು ಭಾರತೀಯ ಯುವ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಶ್ರೀನಿವಾಸ್ ಭದ್ರಾವತಿ ವೆಂಕಟಾ, ಸಂಜನಾ ಜಾತವ್ ರಾಜಸ್ಥಾನದ ಭರತ್‌ಪುರವನ್ನು ಪ್ರತಿನಿಧಿಸುವ ಸಂಸತ್ತಿನ ಕಾಂಗ್ರೆಸ್ ಸದಸ್ಯೆ ಕೂಡ ಇದನ್ನು ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

೧೩ ಸೆಕೆಂಡ್‌ಗಳ ಕ್ಲಿಪ್‌ನಲ್ಲಿ, ಅವರು ಸಂವಿಧಾನದ ದೊಡ್ಡ ಪ್ರತಿಯನ್ನು ಹಿಡಿದುಕೊಂಡು ಮಾತನಾಡುತ್ತಿರುವುದನ್ನು ಕಾಣಬಹುದು ಮತ್ತು ಅದು ಕೈಯಿಂದ ಜಾರಿಕೊಂಡು ಅವರ ಪಾದಗಳ ಬಳಿ ಬೀಳುತ್ತದೆ. ಕ್ಲಿಪ್ ಮುಗಿಯುವ ಮೊದಲು ಕ್ಯಾಮರಾ ರಾಜ್ಯಸಭೆಯ ಅಧ್ಯಕ್ಷರಾದ ಭಾರತದ ಉಪಾಧ್ಯಕ್ಷ ಜಗದೀಪ್ ಧನಕರ್ ಅವರನ್ನು ತೋರಿಸುತ್ತದೆ.

ಈ ಪೋಷ್ಟ್ ಗಳ ಶೀರ್ಷಿಕೆಯು ನಡ್ಡಾ ಅವರು ಭಾರತೀಯ ಸಂವಿಧಾನವನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೋಷ್ಟ್ ಗಳ ಆರ್ಕೈವ್ ಮಾಡಿದ ಲಿಂಕ್‌ಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಆದರೆ, ಸಂಸತ್ತಿನ ಅಧಿವೇಶನದ ಪೂರ್ಣ ದೃಶ್ಯಗಳಲ್ಲಿ, ನಡ್ಡಾ ಅವರು ಪುಸ್ತಕ ಜಾರಿದಾಗ ಕೆಳಗೆ ಇಡಲು ಹೆಣಗಾಡುತ್ತಿರುವುದನ್ನು ನಾವು ಕಂಡುಕೊಂಡಿದ್ದೇವೆ, ಆದರೆ ಸ್ವಲ್ಪ ಸಮಯದ ನಂತರ ಕ್ಯಾಮೆರಾ ಅವರ ಬಳಿಗೆ ಹೋದಾಗ, ಅವರು ಅದನ್ನು ತಮ್ಮ ಪಕ್ಕದಲ್ಲಿ ಇಟ್ಟುಕೊಂಡಿರುವುದು ಗೋಚರಿಸುತ್ತದೆ. ಸಂಸತ್ತಿನ ಸಿಸಿಟಿವಿ ದೃಶ್ಯಾವಳಿಗಳು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದು, ನಡ್ಡಾ ಸಂವಿಧಾನವನ್ನು ನೆಲದ ಮೇಲೆ ಬಿದ್ದ ನಂತರ ಎತ್ತಿಕೊಂಡಿದ್ದಾರೆ ಎಂದು ತೋರಿಸುತ್ತದೆ.

ನಾವು ಕಂಡುಕೊಂಡಿದ್ದು ಏನು?

ಯೂಟ್ಯೂಬ್‌ನಲ್ಲಿ ಇತ್ತೀಚಿನ ರಾಜ್ಯಸಭಾ ಅಧಿವೇಶನಗಳ ಕೀವರ್ಡ್ ಹುಡುಕಾಟವು ಭಾರತೀಯ ಸುದ್ದಿ ಚಾನೆಲ್ ಸಿಎನ್ಎನ್ ನ್ಯೂಸ್-೧೮ ಅಪ್‌ಲೋಡ್ ಮಾಡಿದ ವೀಡಿಯೋಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು. ಫೆಬ್ರವರಿ ೧೧, ೨೦೨೫ ರಂದು ನಡೆದ ರಾಜ್ಯಸಭಾ ಸಂಸತ್ತಿನ ಬಜೆಟ್ ಅಧಿವೇಶನದ ನೇರ ಪ್ರಸಾರ ವೀಡಿಯೋದಲ್ಲಿ ಘಟನೆ ಸಂಭವಿಸಿದೆ.

ವೀಡಿಯೋವನ್ನು ಪರಿಶೀಲಿಸಿದ ನಂತರ, ವೈರಲ್ ಪೋಷ್ಟ್ ಗಳಲ್ಲಿ ಹಂಚಿಕೊಂಡ ಘಟನೆಯು ೧೨:೪೦ ಮಾರ್ಕ್‌ನಲ್ಲಿ ನಡೆದಿದೆ ಎಂದು ನಾವು ಕಂಡುಕೊಂಡಿದ್ದೇವೆ. ಇಲ್ಲಿ, ನಡ್ಡಾ ಅವರು ಸಂವಿಧಾನದ ಮೇಲಿನ ಹಿಡಿತವನ್ನು ಕಳೆದುಕೊಳ್ಳುವುದನ್ನು ನಾವು ನೋಡಬಹುದು; ಕ್ಯಾಮರಾ ಧನಕರ್‌ಗೆ ಹಿಂತಿರುಗಿದಂತೆ ಅದು ಅವರ ಕೈಯಿಂದ ಜಾರಿಬೀಳುತ್ತದೆ.

Full View

 

ಆದರೆ, ಮುಂದಿನ ಬಾರಿ ನಡ್ಡಾ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ಅದೇ ವೀಡಿಯೋದ ೧೫:೫೫ ಮಾರ್ಕ್‌ನಲ್ಲಿ, ಸಂವಿಧಾನವು ಅವರ ಪಕ್ಕದಲ್ಲಿರುವ ಅವರ ಬೆಂಚ್‌ನಲ್ಲಿದೆ ಎಂದು ತೋರುತ್ತದೆ, ಅವರು ಮಾತನಾಡುವಾಗ ಅದನ್ನು ಎತ್ತುತ್ತಾರೆ. ಆರಂಭದಲ್ಲಿ ಅದು ಅವರ ಕೈಯಿಂದ ಬಿದ್ದ ನಂತರ ಅವರು ಪ್ರತಿಯನ್ನು ತೆಗೆದುಕೊಂಡರು ಎಂದು ಇದು ಸೂಚಿಸುತ್ತದೆ.

ಇದರಿಂದ ಸೂಚನೆಯನ್ನು ತೆಗೆದುಕೊಂಡು, ಸಾಮಾಜಿಕ ಮಾಧ್ಯಮದಲ್ಲಿ ಹಿಂದಿ ಕೀವರ್ಡ್ ಹುಡುಕಾಟವು ಬಿಜೆಪಿ ಸಂಸದ ಸುಧಾಂಶು ತ್ರಿವೇದಿಯವರ ಎಕ್ಸ್ ಪೋಷ್ಟ್ ಗೆ (ಇಲ್ಲಿ ಆರ್ಕೈವ್ ಮಾಡಲಾಗಿದೆ) ನಮ್ಮನ್ನು ಕರೆದೊಯ್ಯಿತು, ಅದರಲ್ಲಿ ಅವರು ಈ ಹೇಳಿಕೆಯನ್ನು ಉದ್ದೇಶಿಸಿ ಮತ್ತು ಘಟನೆಯ ತಡೆರಹಿತ ಸಿಸಿಟಿವಿ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ, ನಡ್ಡಾ ಅವರ ಚಲನವಲನಗಳನ್ನು ಸೆರೆಹಿಡಿಯಲಾಗಿದೆ. ಈ ೧೫-ಸೆಕೆಂಡ್ ಕ್ಲಿಪ್‌ನಲ್ಲಿ, ನಡ್ಡಾ ಅವರು ಸಂವಿಧಾನದ ಹಿಡಿತವನ್ನು ಕಳೆದುಕೊಳ್ಳುತ್ತಿರುವುದನ್ನು ಕಾಣಬಹುದು, ಅದನ್ನು ನೆಲದಿಂದ ಎತ್ತಿಕೊಂಡು ೦:೦೮ ಟೈಮ್‌ಸ್ಟ್ಯಾಂಪ್‌ನಲ್ಲಿ ಅದನ್ನು ಮತ್ತೆ ತಮ್ಮ ಟೇಬಲ್ ಮೇಲೆ ಇಟ್ಟಿಕೊಳ್ಳುತ್ತಾರೆ. ನಂತರ ಅದನ್ನು ಮತ್ತೆ ಪ್ರದರ್ಶನಕ್ಕೆ ಎತ್ತಿಕೊಳ್ಳುತ್ತಿರುವುದು ಕಂಡುಬರುತ್ತದೆ.

 

ಸಿಸಿಟಿವಿ ದೃಶ್ಯಾವಳಿಗಳಲ್ಲಿ, ನಡ್ಡಾ ಅವರು ಸಂವಿಧಾನವನ್ನು ಕೈಬಿಟ್ಟ ತಕ್ಷಣ ಅದನ್ನು ಎತ್ತಿಕೊಳ್ಳುವುದು ಕಂಡುಬರುತ್ತದೆ. (ಮೂಲ: ಎಕ್ಸ್/ಲಾಜಿಕಲಿ ಫ್ಯಾಕ್ಟ್ಸ್‌ನಿಂದ ಮಾರ್ಪಡಿಸಲಾಗಿದೆ)

ನಡ್ಡಾ ಅವರು ಸಂವಿಧಾನದೊಂದಿಗೆ ಹೋರಾಡಿ ಅದರ ಮೇಲಿನ ಹಿಡಿತವನ್ನು ಕಳೆದುಕೊಂಡಾಗ, ಅವರು ಅದನ್ನು ನೆಲದ ಮೇಲೆ ಇಡದೆ ಮತ್ತೆ ಟೇಬಲ್ ಮೇಲೆ ಹಾಗು ನಂತರ ಅವರ ಮುಂದಿನ ಆಸನದ ಮೇಲೆ ಇರಿಸಿದರು ಎಂದು ಇದು ದೃಢಪಡಿಸುತ್ತದೆ.

ತೀರ್ಪು

ನಡ್ಡಾ ಅವರು ಸಂವಿಧಾನವನ್ನು ತಮ್ಮ ಪಾದದ ಬಳಿ ಇಟ್ಟಿರುವಂತೆ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ. ಆದರೆ, ಸಂಸತ್ತಿನ ಅಧಿವೇಶನದ ನೇರ ಪ್ರಸಾರದಲ್ಲಿ ಮತ್ತು ವಿವಿಧ ಕೋನಗಳಿಂದ, ಅವರು ನಂತರ ಅದನ್ನು ಎತ್ತಿಕೊಂಡು ತಮ್ಮ ಬೆಂಚ್ ಮೇಲೆ ಇಡುವುದು ಗೋಚರಿಸುತ್ತದೆ.

(ಅನುವಾದಿಸಿದವರು: ಅಂಕಿತಾ ಕುಲಕರ್ಣಿ)

Read this fact-check in English here.

 ಈ ಲೇಖನವನ್ನು ಮೊದಲು'logicallyfacts.com' ಪ್ರಕಟಿಸಿದೆ. ʼಶಕ್ತಿ ಕಲೆಕ್ಟಿವ್‌ʼನ ಭಾಗವಾಗಿ ವಾರ್ತಾ ಭಾರತಿ ಪ್ರಕಟಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - logicallyfacts

contributor

Similar News