ನೀಟ್ ಪರೀಕ್ಷೆಯಲ್ಲಿ ಅಕ್ರಮ ಆರೋಪ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್
Update: 2024-06-16 06:06 GMT
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ನೀಟ್ ಪರೀಕ್ಷೆಯಲ್ಲಿ ಕೇಳಿ ಬಂದಿರುವ ಅಕ್ರಮದ ಆರೋಪ ಕುರಿತು ಮೌನವಾಗಿರುವುದು ಏಕೆ ಎಂದು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಕಪಿಲ್ ಸಿಬಲ್, 'ನೀಟ್ ಪರೀಕ್ಷೆ. ಗುಜರಾತ್ ಫ್ಯಾಕ್ಟರ್. ಬಹಿರಂಗ ಭ್ರಷ್ಟಾಚಾರ. ಬಹಿರಂಗ ಮ್ಯಾನಿಪ್ಯುಲೇಷನ್. ದಯವಿಟ್ಟು ಗಮನಿಸಿ: ಮೋದಿ 'ನೀಟ್' ಸೈಲೆನ್ಸ್' ಎಂದು ಬರೆದಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳನ್ನು ಎನ್‌ಟಿಎ ನಿರಾಕರಿಸಿದೆ ಹಾಗೂ ಗ್ರೇಸ್ ಅಂಕಗಳನ್ನು ನೀಡಿರುವುದು ಒಟ್ಟಾರೆ ಫಲಿತಾಂಶಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
1563 ವಿದ್ಯಾರ್ಥಿಗಳಿಗೆ ನೀಡಲಾದ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ ಎಂದು ಸರಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.