ಘೋಷಣೆಯಾಗಿಯೇ ಉಳಿಯಲಿರುವ ಬಿಜೆಪಿಯ 'ಅಬ್ ಕಿ ಬಾರ್ 400 ಪಾರ್'
Update: 2024-06-04 09:35 GMT
ಹೊಸದಿಲ್ಲಿ: ಲೋಕಸಭಾ ಚುನಾವಣಾ ಮತ ಎಣಿಕೆ ಮುಂದುವರಿದಂತೆ ಬಿಜೆಪಿಯ “ಅಬ್ ಕಿ ಬಾರ್ 400 ಪಾರ್” ಘೋಷವಾಕ್ಯ ನಿಜವಾಗುವ ಸಾಧ್ಯತೆಯಿಲ್ಲ ಎಂಬುದು ನಿಚ್ಚಳವಾಗಿದೆ. ಕಳೆದ 10 ವರ್ಷಗಳಲ್ಲಿ ಎನ್‌ಡಿಎ ಮೈತ್ರಿಕೂಟದಲ್ಲಿ ತನ್ನ ಪ್ರಾಬಲ್ಯ ಮೆರೆದಿದ್ದ ಬಿಜೆಪಿ ಈ ಬಾರಿ ಮಿತ್ರಪಕ್ಷಗಳಾದ ನಿತೀಶ್ ಕುಮಾರ್ ಅವರ ಜೆಡಿ(ಯು) ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಅನ್ನು ಅವಲಂಬಿಸಬೇಕಿದೆ. ಈ ಎರಡೂ ಪಕ್ಷಗಳು ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಎನ್‌ಡಿಎ ಭಾಗವಾಗಿದ್ದವು.
ನಿತೀಶ್ ಕುಮಾರ್ ಅವರ ಪಕ್ಷವು ಲಾಲು ಪ್ರಸಾದ್ ಯಾದವ್ ಅವರ ಆರ್‌ಜೆಡಿ ಜೊತೆ ಭಿನ್ನಾಭಿಪ್ರಾಯದ ನಂತರ ಮತ್ತೆ ಎನ್‌ಡಿಎಗೆ ವಾಪಸಾದರೆ, 10 ವರ್ಷ ಬಿಜೆಪಿಯಿಂದ ದೂರವಿದ್ದ ಚಂದ್ರಬಾಬು ನಾಯ್ಡು ಮತ್ತೆ ಎನ್‌ಡಿಎ ಭಾಗವಾದರು.
2014 ಚುನಾವಣೆಯಲ್ಲಿ ಬಿಜೆಪಿಗೆ 282 ಸ್ಥಾನಗಳು ದೊರಕಿದ್ದರೆ 2019ರಲ್ಲಿ 303 ಸ್ಥಾನಗಳು ಲಭಿಸಿದ್ದವು.