ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ 3.7 ತೀವ್ರತೆಯ ಭೂಕಂಪನ
Update: 2025-01-06 12:06 GMT
ಪಾಲ್ಘರ್: ಇಂದು ಮುಂಜಾನೆ ಮಹಾರಾಷ್ಟ್ರ ರಾಜ್ಯದ ಪಾಲ್ಘರ್ ಜಿಲ್ಲೆಯಲ್ಲಿ 3.7 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಮುಂಜಾನೆ 4.35ರ ವೇಳೆಗೆ ಪಾಲ್ಘರ್ ಜಿಲ್ಲೆಯ ದಹನು ತಾಲ್ಲೂಕಿನಲ್ಲಿ ಭೂಕಂಪನ ಚಟುವಟಿಕೆ ಕಂಡು ಬಂದಿದೆ ಎಂದು ಅಧಿಕೃತ ವರದಿಗಳನ್ನು ಉಲ್ಲೇಖಿಸಿ ಜಿಲ್ಲಾ ವಿಪತ್ತು ನಿರ್ವಹಣಾ ಘಟಕದ ಮುಖ್ಯಸ್ಥ ವಿವೇಕಾನಂದ್ ಕದಂ ದೃಢಪಡಿಸಿದ್ದಾರೆ.
ದಹನು ತಾಲ್ಲೂಕಿನ ಬೋರ್ಡಿ, ದಪ್ಚರಿ ಹಾಗೂ ತಲಸಾರಿ ಪ್ರಾಂತ್ಯದ ನಿವಾಸಿಗಳಿಗೆ ಇಂದು ಮುಂಜಾನೆ ಭೂಕಂಪನದ ಅನುಭವವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಘಟನೆಯಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.