ಇಂಡಿಯಾ ಮೈತ್ರಿಕೂಟದ ನಾಯಕತ್ವವನ್ನು ಮಮತಾ ಬ್ಯಾನರ್ಜಿಗೆ ವಹಿಸಬೇಕು: ಲಾಲೂ ಪ್ರಸಾದ್ ಯಾದವ್
Update: 2024-12-10 06:50 GMT
ಪಾಟ್ನಾ: “ಕಾಂಗ್ರೆಸ್ ಆಕ್ಷೇಪದಲ್ಲಿ ಯಾವುದೇ ಅರ್ಥವಿಲ್ಲ. ನಾವು ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತೇವೆ. ಇಂಡಿಯಾ ಮೈತ್ರಿಕೂಟದ ನಾಯಕತ್ವವನ್ನು ಮಮತಾ ಬ್ಯಾನರ್ಜಿ ಅವರಿಗೆ ವಹಿಸಬೇಕು. ನಾವು 2025ರಲ್ಲಿ ಮತ್ತೆ ಸರಕಾರ ರಚಿಸಲಿದ್ದೇವೆ..” ಎಂದು ಮಂಗಳವಾರ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.
ಮಮತಾ ಬ್ಯಾನರ್ಜಿ ಅವರನ್ನು ಇಂಡಿಯಾ ಮೈತ್ರಿಕೂಟದ ಮುಖ್ಯಸ್ಥರನ್ನಾಗಿಸಬೇಕು ಎಂದು ರವಿವಾರ ತೃಣಮೂಲ ಕಾಂಗ್ರೆಸ್ ಪಕ್ಷ ಆಗ್ರಹಿಸಿತ್ತು. ಈ ಕುರಿತು ಪ್ರತಿಕ್ರಿಯಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದ ಕೀರ್ತಿ ಆಝಾದ್, ಬಿಜೆಪಿಯನ್ನು ಪದೇ ಪದೇ ಪರಾಭವಗೊಳಿಸಿರುವ ಮಮತಾ ಬ್ಯಾನರ್ಜಿ, ಇಂಡಿಯಾ ಮೈತ್ರಿಕೂಟದ ನಾಯಕತ್ವಕ್ಕೆ ಅತ್ಯಂತ ಸೂಕ್ತ ಎಂದು ಪ್ರತಿಪಾದಿಸಿದ್ದರು.