ಮಹಾರಾಷ್ಟ್ರ | ಆ.15ರಂದು ಅನಧಿಕೃತ ರ‍್ಯಾಲಿ ನಡೆಸಿದ ಆರೋಪ; 50ಕ್ಕೂ ಅಧಿಕ ಎಸ್‌ಡಿಪಿಐ ಸದಸ್ಯರ ವಿರುದ್ಧ ಪ್ರಕರಣ ದಾಖಲು

Update: 2024-08-18 13:45 GMT

ಸಾಂದರ್ಭಿಕ ಚಿತ್ರ (PTI)

ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾದಲ್ಲಿ ಸ್ವಾತಂತ್ರ್ಯ ದಿನದಂದು ಅನುಮತಿಯಿಲ್ಲದೆ ಬೈಕ್ ರ‍್ಯಾಲಿ ನಡೆಸಿದ್ದಾರೆಂದು ಆರೋಪಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ)ದ 50ಕ್ಕೂ ಅಧಿಕ ಸದಸ್ಯರ ವಿರುದ್ಧ ಪೋಲಿಸರು ಪ್ರಕರಣ ದಾಖಲಿಸಿದ್ದಾರೆ.

ಎಸ್‌ಡಿಪಿಐ ಸದಸ್ಯರ ವಿರುದ್ಧ ಬಿಎನ್‌ಎಸ್ ಕಲಂ 223( ಸರಕಾರಿ ಅಧಿಕಾರಿಯ ಆದೇಶಕ್ಕೆ ಅವಿಧೇಯತೆ) ಮತ್ತು ಮಹಾರಾಷ್ಟ್ರ ಪೋಲಿಸ್ ಕಾಯ್ದೆಯಡಿ ಆರೋಪವನ್ನು ಹೊರಿಸಲಾಗಿದೆ ಎಂದು ಪೋಲಿಸ್ ಅಧಿಕಾರಿಯೋರ್ವರು ರವಿವಾರ ತಿಳಿಸಿದರು.

ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಮುಂಬ್ರಾದಿಂದ ಕೌಸಾದ ತಲಾವ್‌ ಪಲಿವರೆಗೆ ರ‍್ಯಾಲಿಯನ್ನು ನಡೆಸಲಾಗಿತ್ತು. ಅದಕ್ಕಾಗಿ ಅವರು ಪೋಲಿಸರಿಂದ ಅನುಮತಿಯನ್ನು ಪಡೆದುಕೊಂಡಿರಲಿಲ್ಲ ಎಂದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News