ಭವಿಷ್ಯದ ಕ್ರಿಕೆಟ್ ಸ್ಟಾರ್ ಗಳಿಗಾಗಿ ಪ್ರತಿಭಾನ್ವೇಷಣೆ ಮಾಡಿದ ಮೈಸೂರು ವಾರಿಯರ್ಸ್

Update: 2024-07-16 16:18 GMT

PC : mysorewarriors.com

ಬೆಂಗಳೂರು : ಭಾರತದ ಪ್ರಮುಖ ಅಗರಬತ್ತಿ ತಯಾರಕರು ಹಾಗೂ ಮೈಸೂರು ವಾರಿಯರ್ಸ್‌ನ ಮಾಲಿಕರಾಗಿರುವ ಎನ್‌ಆರ್ ಗ್ರೂಪ್ ಕರ್ನಾಟಕದಲ್ಲಿ ನಡೆಯುವ ಮುಂದಿನ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಪ್ರತಿನಿಧಿಸಲು ಬೆಂಗಳೂರಿನಲ್ಲಿ ಯುವ ಆಟಗಾರರ ಪ್ರತಿಭಾನ್ವೇಷಣೆ ನಡೆಸಿತು.

ಈ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಆಟಗಾರರು ಮುಂಬರುವ ಮಹಾರಾಜ ಟ್ರೋಫಿ ಕೆಎಸ್‌ಸಿಎಯಲ್ಲಿ ಮೈಸೂರು ವಾರಿಯರ್ಸ್ ತಂಡದ ಪರವಾಗಿ ಆಡಲಿದ್ದಾರೆ ಹಾಗೂ ಕೆಎಸ್‌ಸಿಎ ಟಿ20 2024ರ ಹರಾಜಿನಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಳ್ಳಲಿದ್ದಾರೆ.

ಮೊದಲ ಪ್ರತಿಭಾನ್ವೇಷಣೆಯು ಜುಲೈ 12 ರಂದು ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಿತು. ಇದರಲ್ಲಿ 124 ಮಧ್ಯಮ ವೇಗದ ಬೌಲರ್‌ಗಳು, 54 ಸ್ಪಿನ್ನರ್‌ಗಳು, 47 ಬ್ಯಾಟರ್‌ ಗಳು, 14 ಆಲ್‌ ರೌಂಡರ್‌ಗಳು ಮತ್ತು 20 ವಿಕೆಟ್ ಕೀಪರ್‌ಗಳು ಸೇರಿದಂತೆ 260ಕ್ಕೂ ಹೆಚ್ಚು ಯುವ ಕ್ರಿಕೆಟಿಗರು ಭಾಗವಹಿಸಿದ್ದರು. ಮುಂದಿನ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಜುಲೈ 18ರಂದು ಮೈಸೂರಿನಲ್ಲಿ ನಡೆಯಲಿದೆ. ಆ ಬಳಿಕ ಆಯ್ಕೆಯಾದ ಆಟಗಾರರ ಹೆಸರನ್ನು ಕೆಎಸ್‌ಸಿಎಗೆ ಶಿಫಾರಸು ಮಾಡಲಾಗುವುದು. ಜುಲೈ 25ರಂದು ನಡೆಯುವ ಹರಾಜು ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳಬಹುದು.

ಹರಾಜು ಪ್ರಕ್ರಿಯೆಯ ಬಳಿಕ ತಂಡವನ್ನು ಸೇರುವ ಆಟಗಾರರು ಮೈಸೂರಿನಲ್ಲಿ ಒಂದು ವಾರಗಳ ಕಾಲ ಕಠಿಣ ತರಬೇತಿ ಪಡೆಯಲಿದ್ದಾರೆ. ನಂತರ ಆಗಸ್ಟ್ 15ರಿಂದ ಸೆಪ್ಟೆಂಬರ್ 1ರವರೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಮಹಾರಾಜ ಟ್ರೋಫಿ ಮಹಾರಾಜ ಟ್ರೋಫಿ ಪಂದ್ಯಾವಳಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಲಿದ್ದಾರೆ.

ಪ್ರತಿಭಾನ್ವೇಷಣೆ ಕಾರ್ಯಕ್ರದಲ್ಲಿ ಮೈಸೂರು ವಾರಿಯರ್ಸ್‌ನ ಮಾಲಿಕರಾದ ಅರ್ಜುನ್ ರಂಗ, ಮೈಸೂರು ವಾರಿಯರ್ಸ್‌ ನ ಆಟಗಾರ ಕರುಣ್ ನಾಯರ್, ತಂಡದ ವ್ಯವಸ್ಥಾಪಕರಾದ ಸುರೇಶ್ ಎಂ. ಆರ್. ಹಾಗೂ ಮೈಸೂರು ವಾರಿಯರ್ಸ್‌ನ ಸಹಾಯಕ ಕೋಚ್ ವಿಜಯ್ ಮದ್ಯಾಳ್ಕರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News