ರಾಹುಲ್ ಗಾಂಧಿ ಅಪಾಯಕಾರಿ ವ್ಯಕ್ತಿ: ಕಂಗನಾ ರಣಾವತ್

Update: 2024-08-12 16:05 GMT

ರಾಹುಲ್ ಗಾಂಧಿ ,  ಕಂಗನಾ ರಣಾವತ್ | PTI 

ಹೊಸದಿಲ್ಲಿ: ಸೆಬಿ-ಹಿಂಡೆನ್‌ಬರ್ಗ್ ವಿವಾದ ಕುರಿತು ಹೇಳಿಕೆಗಳಿಗಾಗಿ ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದೆ ಕಂಗನಾ ರಣಾವತ್,ಅವರು ಅಪಾಯಕಾರಿ ವ್ಯಕ್ತಿಯಾಗಿದ್ದು,ದೇಶದ ಭದ್ರತೆ ಮತ್ತು ಆರ್ಥಿಕತೆ ಸೇರಿದಂತೆ ಪ್ರತಿಯೊಂದನ್ನೂ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಎಕ್ಸ್ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.

ರಾಹುಲ ವಿಷಕಾರಿ ಮತ್ತು ವಿನಾಶಕಾರಿ ವ್ಯಕ್ತಿಯಾಗಿದ್ದು,ತಾನು ಪ್ರಧಾನಿಯಾಗದಿದ್ದರೆ ಈ ದೇಶವನ್ನು ನಾಶಗೊಳಿಸುವುದು ಅವರ ಅಜೆಂಡಾ ಆಗಿದೆ ಎಂದೂ ಕಂಗನಾ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News