ರೈಲ್ವೆ ನೌಕರರಿಗೆ 2,029 ಕೋಟಿ ರೂ. ಬೋನಸ್ ನೀಡಲು ಕೇಂದ್ರ ಸರಕಾರ ಅನುಮೋದನೆ
Update: 2024-10-03 16:54 GMT
ಹೊಸದಿಲ್ಲಿ : 11.72 ಲಕ್ಷಕ್ಕೂ ಅಧಿಕ ರೈಲ್ವೆ ನೌಕರರಿಗೆ ಬೋನಸ್ ಪಾವತಿಸಲು ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ವಿಶೇಷ ಸಭೆಯಲ್ಲಿ ಕೇಂದ್ರ ಸಂಪುಟ ಪ್ರಮುಖ ಬಂದರು ಪ್ರಾಧಿಕಾರಕ್ಕೆ ಪರಿಷ್ಕೃತ ಉತ್ಪಾದಕತೆ ಸಂಬಂಧಿಸಿದ ಬಹುಮಾನ ಯೋಜನೆಗೆ ಕೂಡ ಅನುಮೋದನೆ ನೀಡಿದೆ.
ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾಗಿರುವ ಉತ್ಪಾದಕತೆ ಸಂಬಂಧಿತ ಬೋನ್‌ಸ್‌ಗೆ ಸಂಪುಟ ಅನುಮೋದನೆ ನೀಡಿದೆ. ಇದರ ಮೊತ್ತ 2,029 ಕೋಟಿ ರೂ. ಆಗುತ್ತದೆ. ಈ ನಿರ್ಧಾರದಿಂದ ಸುಮಾರು 12 ಲಕ್ಷ ನೌಕರರಿಗೆ ಅನುಕೂಲವಾಗಲಿದೆ.
ಈ ಮೊತ್ತವನ್ನು ಹಳಿ ನಿರ್ವಹಣೆಗಾರರು, ಲೊಕೊ ಪೈಲೆಟ್ ಗಳು, ರೈಲು ನಿರ್ವಹಣೆಗಾರರು (ಗಾರ್ಡ್), ಸ್ಟೇಷನ್ ಮಾಸ್ಟರ್, ಮೇಲ್ವಿಚಾರಕರು, ಟೆಕ್ನೀಷಿಯನ್, ಟಿಕ್ನೀಷಿಯನ್ ಸಹಾಯಕರು, ಪಾಯಿಂಟ್ಸ್‌ಮ್ಯಾನ್, ಮಿನಿಸ್ಟೇರಿಯಲ್ ಸ್ಟಾಪ್ ಹಾಗೂ ರೈಲ್ವೆಯ ವಿವಿಧ ವರ್ಗಗಳ ನೌಕರರಿಗೆ ಪಾವತಿಸಲಾಗುವುದು.