"ಸರ್ಕಾರದ ವಿರುದ್ಧದ ಹೇಳಿಕೆಗಳ ಸದ್ದಡಗಿಸುವ ಪ್ರಯತ್ನ": ಉದ್ದೇಶಿತ ಪ್ರಸಾರ ಸೇವೆ ಮಸೂದೆ ವಿರುದ್ಧ ಪತ್ರಕರ್ತ ರವೀಶ್ ಕುಮಾರ್ ಎಚ್ಚರಿಕೆ

Update: 2024-08-04 08:45 GMT

ರವೀಶ್ ಕುಮಾರ್

ಹೊಸದಿಲ್ಲಿ: ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆಯ ಕರಡಿನ ಬಗ್ಗೆ ಖ್ಯಾತ ಪತ್ರಕರ್ತ ರವೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಇರುವ ಕೇಬಲ್ ಟಿವಿ ನಿಯಂತ್ರಣಗಳನ್ನು ಸಮಗ್ರವಾಗಿ ಬದಲಾಯಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.

ಧ್ರುವ ರಾಠಿ, ಬೀರ್ ಬೈಸೆಪ್ಸ್ ಮತ್ತು ಕುಮಾರ್ ಮುಂತಾದ ಡಿಜಿಟಲ್ ವಿಷಯಗಳನ್ನು ಸೃಷ್ಟಿಸುವವರನ್ನು ಸುದ್ದಿ ಪ್ರಸಾರಕ ವರ್ಗಗಳಾಗಿ ವಿಂಗಡಿಸಲು ಮಸೂದೆ ಉದ್ದೇಶಿಸಿದ್ದು, ಇವರು ಹೊಸ ನಿಬಂಧನೆಗಳು ಮತ್ತು ನೀತಿಸಂಹಿತೆಗೆ ಒಳಪಡಲಿದ್ದಾರೆ.

ಶನಿವಾರ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಅವರು, ಸರ್ಕಾರದ ವಿರುದ್ಧದ ಹೇಳಿಕೆಗಳ ಸದ್ದಡಗಿಸುವ ಪ್ರಯತ್ನವನ್ನು ಇದು ಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಈ ಮಸೂದೆ ಗೊಂದಲಕಾರಿಯಾಗಿದ್ದು, "ನಿರ್ದಿಷ್ಟಪಡಿಸಿರುವಂತೆ" ಎಂಬ ಪದಪುಂಜವು 42 ಬಾರಿ ಮಸೂದೆಯಲ್ಲಿ ಉಲ್ಲೇಖಗೊಂಡಿದೆ. ಹಿಂದಿನ ಕರಡಿನಿಂದ ಭಿನ್ನವಾಗಿ, ಸಾರ್ವಜನಿಕ ಸಲಹೆಗಳಿಗೆ ಮುಕ್ತವಾಗಿ ನೀಡುವ ಬದಲು ನಿರ್ದಿಷ್ಟ ಪ್ರಸಾರಕರು ಮತ್ತು ಸಂಘಗಳಿಗೆ ಮಾತ್ರ ನೀಡಲಾಗಿದೆ. ಇದು ಪಾರದರ್ಶಕತೆ ಮತ್ತು ಶಾಸನ ಪ್ರಕ್ರಿಯೆಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆ ಬಗೆಗೆ ಪ್ರಶ್ನೆಗಳನ್ನು ಮೂಡಿಸುತ್ತದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News