ಸತತ ಆರನೇ ಬಾರಿ ರೆಪೋ ದರ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲು ನಿರ್ಧರಿಸಿದ ಆರ್‌ಬಿಐ

Update: 2024-02-08 06:17 GMT

ಸಾಂದರ್ಭಿಕ ಚಿತ್ರ (PTI)

ಮುಂಬೈ: ತನ್ನ ಸತತ ಆರನೇ ಸಭೆಯಲ್ಲಿ ರಿಸರ್ವ್ ಬ್ಯಾಂಕ್‌ ರೆಪೋ ದರವನ್ನು ಬದಲಾಯಿಸದೇ ಇರಲು ನಿರ್ಧರಿಸಿದೆ.

ಮೂವರು ಆರ್‌ಬಿಐ ಹಾಗೂ ಮೂವರು ಬಾಹ್ಯ ಸದಸ್ಯರನ್ನೊಳಗೊಂಡ ಆರು ಸದಸ್ಯರ ವಿತ್ತೀಯ ನೀತಿ ಸಮಿತಿಯು ರೆಪೋ ದರವನ್ನು ಶೇ6.5ರಲ್ಲಿಯೇ ಉಳಿಸಲು ನಿರ್ಧರಿಸಿದೆ. ಮೇ 2022 ಹಾಗೂ ಫೆಬ್ರವರಿ 2023ರ ನಡುವೆ ರೆಪೋ ದರವನ್ನು 250 ಬೇಸಿಸ್‌ ಅಂಕಗಳಷ್ಟು ಏರಿಸಲಾಗಿತ್ತು.

ವಿತ್ತೀಯ ನೀತಿಯು ಸಕ್ರಿಯವಾಗಿ ಹಣದುಬ್ಬರ ವಿರೋಧಿಯಾಗಿ ಮುಂದುವರಿಯಬೇಕು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್ ದಾಸ್‌ ಹೇಳಿದ್ದಾರೆ.

ರೆಪೋ ರೇಟ್‌ ಬದಲಾಯಿಸದೇ ಇರುವ ನಿರ್ಧಾರವನ್ನು ವಿತ್ತೀಯ ಸಮಿತಿಯ ಆರು ಸದಸ್ಯರ ಪೈಕಿ ಐದು ಮಂದಿ ಬೆಂಬಲಿಸಿದ್ದರು.

ವಾರ್ಷಿಕ ರಿಟೇಲ್‌ ಹಣದುಬ್ಬರ ನವೆಂಬರ್‌ ತಿಂಗಳಿನಲ್ಲಿ 5.55% ಇದ್ದರೆ ಡಿಸೆಂಬರ್‌ನಲ್ಲಿ 5.69% ಗೆ ಏರಿಕೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News