ಏರ್ ಇಂಡಿಯಾದ ನೂತನ CFO ಆಗಿ ಸಂಜಯ್ ಶರ್ಮಾ ನೇಮಕ

Update: 2024-05-24 17:59 IST
ಏರ್ ಇಂಡಿಯಾದ ನೂತನ CFO ಆಗಿ ಸಂಜಯ್ ಶರ್ಮಾ ನೇಮಕ

ಸಂಜಯ್ ಶರ್ಮಾ | PC: X\ @airindia

  • whatsapp icon

ಹೊಸದಿಲ್ಲಿ: ಜೂನ್ 10 ರಿಂದ ಜಾರಿಗೆ ಬರುವಂತೆ ಸಂಜಯ್ ಶರ್ಮಾ ಅವರನ್ನು ಮುಖ್ಯ ಹಣಕಾಸು ಅಧಿಕಾರಿಯಾಗಿ (CFO) ನೇಮಕ ಮಾಡಲಾಗಿದೆ ಎಂದು ಏರ್ ಇಂಡಿಯಾ ಶುಕ್ರವಾರ ಪ್ರಕಟಿಸಿದೆ.

ಏರ್ ಇಂಡಿಯಾದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ವಿನೋದ್ ಹೆಜ್ಮಾಡಿ ಅವರ ಉತ್ತರಾಧಿಕಾರಿಯಾಗಿ ಶರ್ಮಾ ಅಧಿಕಾರ ಸ್ವೀಕರಿಸಲಿದ್ದಾರೆ. ಕಾರ್ಪೊರೇಟ್ ಫೈನಾನ್ಸ್, ಇನ್ವೆಸ್ಟ್ಮೆಂಟ್ ಬ್ಯಾಂಕಿಂಗ್ ಮತ್ತು ರಿಯಲ್ ಎಸ್ಟೇಟ್ ಕ್ಷೇತ್ರಗಳಲ್ಲಿ ಶರ್ಮಾ ಮೂರು ದಶಕಗಳಿಗೂ ಹೆಚ್ಚು ಅನುಭವವನ್ನು ಹೊಂದಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

ಅವರು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ನಲ್ಲಿ ಸಿಎಫ್‌ಒ ಆಗಿದ್ದರು. ಇದಕ್ಕೂ ಮೊದಲು ಅವರು ಟಾಟಾ ರಿಯಾಲ್ಟಿ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನಲ್ಲಿ ಸಿಎಫ್‌ಒ ಆಗಿಯೂ ಸೇವೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News