ವಯನಾಡ್‌ಗೆ NDRFನಿಂದ ಪರಿಹಾರ ಬಿಡುಗಡೆ ಬಗ್ಗೆ ಸಕಾರಾತ್ಮಕ ಕ್ರಮ ತೆಗದುಕೊಳ್ಳುವಂತೆ ಕೇಂದ್ರಕ್ಕೆ ಕೇರಳ ಹೈಕೋರ್ಟ್ ಸೂಚನೆ
Update: 2024-10-11 06:46 GMT
ಕೇರಳ: ವಯನಾಡಿಗೆ ಎನ್‌ಡಿಆರ್‌ಎಫ್(NDRF) ಮತ್ತು ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ(PMNRF) ಹಣಕಾಸು ಒದಗಿಸುವ ಕುರಿತು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಕೇರಳ ಹೈಕೋರ್ಟ್ ಸೂಚಿಸಿದೆ.
ನ್ಯಾಯಮೂರ್ತಿ ಎ.ಕೆ. ಜಯಶಂಕರ ನಂಬಿಯಾರ್ ಮತ್ತು ನ್ಯಾಯಮೂರ್ತಿ ಶ್ಯಾಮ್ ಕುಮಾರ್ ವಿ ಎಂ ಅವರ ವಿಭಾಗೀಯ ಪೀಠವು, ವಯನಾಡು ಭೂಕುಸಿತದ ಬಳಿಕ ನೈಸರ್ಗಿಕ ವಿಕೋಪಗಳ ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ಸಂಬಂಧಿಸಿ ದಾಖಲಾದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ವೇಳೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ.
ಅ.18ರೊಳಗೆ ಈ ಕುರಿತು ಪ್ರತಿಕ್ರಿಯೆ ಕೂಡ ನೀಡುವಂತೆ ಕೇಂದ್ರಕ್ಕೆ ಹೈಕೋರ್ಟ್ ಈ ಮೊದಲು ಸೂಚನೆಯನ್ನು ನೀಡಿತ್ತು. ಬ್ಯಾಂಕ್ ಸಾಲ ಮನ್ನಾ ಸೇರಿದಂತೆ ವಯನಾಡಿಗೆ ಸಂಬಂಧಿಸಿ ಕೇಂದ್ರವು ಕೆಲವು ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಂತೆ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್‌ಎಲ್ ಸುಂದರೇಶನ್ ಅವರಿಗೆ ಹೈಕೋರ್ಟ್ ಹೇಳಿದೆ.