ಸಂದೇಶಖಾಲಿ ಘಟನೆಗಳ ಬಗ್ಗೆ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಲು ಟಿಎಂಸಿ ಚಿಂತನೆ

Update: 2024-05-11 21:26 IST
  • whatsapp icon

ಕೋಲ್ಕತಾ: ಸಂದೇಶಖಾಲಿಯಲ್ಲಿ ನಡೆದ ಘಟನೆಗಳ ಕುರಿತು ನೈಜ ಮಾಹಿತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೀಡುವುದು ಪಕ್ಷಕ್ಕೆ ಅನಿವಾರ್ಯವಾಗಿದೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶನಿವಾರ ಹೇಳಿದೆ. ಪ.ಬಂಗಾಳದ ಉತ್ತರ 24 ಪರಗಣಗಳ ಜಿಲ್ಲೆಯ ಸಂದೇಶಖಾಲಿಯಲ್ಲಿನ ಘಟನೆಗಳು ಆರೋಪ ಮತ್ತು ಪ್ರತ್ಯಾರೋಪಗಳಿಂದಾಗಿ ಟಿಎಂಸಿ ಮತ್ತು ಬಿಜೆಪಿ ನಡುವೆ ಜಟಾಪಟಿಗೆ ಕಾರಣವಾಗಿವೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ.ಬಂಗಾಳ ಸಚಿವೆ ಹಾಗೂ ಟಿಎಂಸಿ ನಾಯಕಿ ಶಶಿ ಪಾಂಜಾ ಅವರು,‘ಬಿಜೆಪಿಯು ಸಂದೇಶಖಾಲಿಯಿಂದ ತಂಡವೊಂದನ್ನು ಕರೆದೊಯ್ದು ರಾಷ್ಟ್ರಪತಿಗಳಿಗೆ ‘ಸುಳ್ಳು ಚಿತ್ರಣ’ವನ್ನು ನೀಡಿರುವುದು ಆಶ್ಚರ್ಯಕರವಾಗಿದೆ. ನಮ್ಮ ವತಿಯಿಂದ ಸಂದೇಶಖಾಲಿಯಿಂದ ತಂಡವೊಂದನ್ನು ಕರೆದೊಯ್ಯುವ ಮತ್ತು ನಿಜವಾಗಿಯೂ ನಡೆದಿದ್ದೇನು ಎಂಬ ಬಗ್ಗೆ ರಾಷ್ಟ್ರಪತಿಗಳಿಗೆ ತಿಳಿಸುವ ಅಗತ್ಯವಿದೆ ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ನಾವು ಪಕ್ಷದ ಉನ್ನತ ನಾಯಕತ್ವದಿಂದ ಅನುಮತಿಯನ್ನು ಕೇಳಲಿದ್ದೇವೆ’ಎಂದು ತಿಳಿಸಿದರು.

‘ರಾಷ್ಟ್ರಪತಿಗಳನ್ನು ಭೇಟಿಯಾಗಿದ್ದ ಬಿಜೆಪಿ ತಂಡವು ಅವರ ದಾರಿ ತಪ್ಪಿಸಿದೆ. ಕೇಸರಿ ಪಕ್ಷವು ಸುಳ್ಳುಗಳನ್ನು ಹೇಳುವುದನ್ನೇ ಮಾಮೂಲಾಗಿಸಿಕೊಂಡಿದೆ. ನಮ್ಮ ಉನ್ನತ ನಾಯಕತ್ವವು ಅನುಮತಿಸಿದರೆ ರಾಷ್ಟ್ರಪತಿಗಳನ್ನು ಭೇಟಿಯಾಗಲು ಸೂಕ್ತ ಶಿಷ್ಟಾಚಾರವನ್ನು ನಾವು ಅನುಸರಿಸಬೇಕಿದೆ ’ ಎಂದರು.

ಸಂದೇಶಖಾಲಿಯ ಸ್ಥಳೀಯ ಬಿಜೆಪಿ ನಾಯಕರು ಪ್ರದೇಶದಲ್ಲಿಯ ಮಹಿಳೆಯರಿಗೆ ಲೈಂಗಿಕ ಕಿರುಕುಳಗಳನ್ನು ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News