ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿಯ ಸರ್ವ ವಿವರಗಳನ್ನು ತಿಳಿಯುವ ಸಂಪೂರ್ಣ ಹಕ್ಕು ಮತದಾರರಿಗಿಲ್ಲ: ಸುಪ್ರೀಂ ಕೋರ್ಟ್‌

Update: 2024-04-09 09:55 GMT

ಹೊಸದಿಲ್ಲಿ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಒಡೆತನದ ಪ್ರತಿಯೊಂದು ಆಸ್ತಿಯ ವಿವರವನ್ನು ತಿಳಿಯುವ ಸಂಪೂರ್ಣ ಹಕ್ಕು ಮತದಾರರಿಗಿಲ್ಲ ಎಂದು ಸುಪ್ರೀಂ ಕೋರ್ಟ್‌ ಇಂದು ಹೇಳಿದೆ.

“ಒಬ್ಬ ಅಭ್ಯರ್ಥಿಯ ಖಾಸಗಿ ಬದುಕಿನ ಆಳಕ್ಕೆ ಇಳಿಯುವ ಸಂಪೂರ್ಣ ಹಕ್ಕು ಯಾವುದೇ ಮತದಾರರಿಗಿಲ್ಲ, ಮತದಾನದ ಮೇಲೆ ಪರಿಣಾಮ ಬೀರುವಂತಹ ಮಾಹಿತಿ ಬಹಿರಂಗಗೊಳ್ಳಬೇಕು,” ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್‌ ಮತ್ತು ಪಿ ವಿ ಸಂಜಯ್‌ ಕುಮಾರ್‌ ಅವರ ಪೀಠ ಹೇಳಿದೆ.

ಸಾರ್ವಜನಿಕ ಹುದ್ದೆಗೆ ಅಭ್ಯರ್ಥಿತನಕ್ಕೆ ಅಪ್ರಸ್ತುತವಾದ ವಿಚಾರಗಳ ಕುರಿತಂತೆ ಅಭ್ಯರ್ಥಿಗಳಿಗೆ ಗೌಪ್ಯತೆಯ ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.

“ತಾನು ಅಥವಾ ತನ್ನ ಅವಲಂಬಿತ ಕುಟುಂಬ ಸದಸ್ಯರು ಹೊಂದಿರುವ ಬಟ್ಟೆಬರೆ, ಪಾದರಕ್ಷೆಗಳು, ಪೀಠೋಪಕರಣ ಇತ್ಯಾದಿಗಳ ಮೌಲ್ಯವು ಹೆಚ್ಚಾಗಿರದ ಹಾಗೂ ಆತನ ಜೀವನಶೈಲಿಯನ್ನು ಪ್ರತಿಫಲಿಸದ ಹೊರತು ಬಹಿರಂಗಪಡಿಸುವ ಅಗತ್ಯವಿಲ್ಲ,” ಎಂದು ನ್ಯಾಯಾಲಯ ಹೇಳಿದೆ.

ಅರುಣಾಚಲ ಪ್ರದೇಶದಲ್ಲಿ 2019ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ತೇಝು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಕರಿಖೊ ಕ್ರಿ ಅವರ ಆಯ್ಕೆಯನ್ನು ರದ್ದುಗೊಳಿಸಿದ ಗುವಾಹಟಿ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸಿ ಅವರ ಆಯ್ಕೆಯನ್ನು ಎತ್ತಿ ಹಿಡಿದು ಆದೇಶ ನೀಡುವ ವೇಳೆ ಸುಪ್ರೀಂ ಕೋರ್ಟ್‌ ಮೇಲಿನಂತೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News