ವಯನಾಡ್ ಭೂಕುಸಿತ | ಚಾಲಿಯಾರ್ ನದಿ ತಪ್ಪಲಿನಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

Update: 2024-08-06 16:48 GMT

PC : PTI 

ವಯನಾಡ್ : 350ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ವಯನಾಡ್‌ನ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮಂಗಳವಾರವೂ ಮುಂದುವರಿದಿದೆ. ಶೋಧ ಕಾರ್ಯಾಚರಣೆಯನ್ನು ಚಾಲಿಯಾರ್ ನದಿ ತಪ್ಪಲಿನಲ್ಲಿ ಕೇಂದ್ರೀಕರಿಸಲಾಗಿದ್ದು,, ಮೃತದೇಹಗಳು ಹಾಗೂ ಅವಶೇಷಗಳಿಗಾಗಿ ವಿಶೇಷ ತಂಡವೊಂದು ಹೆಲಿಕಾಪ್ಟರ್‌ಮೂಲಕ ನದಿಯನ್ನು ಪರಿಶೀಲಿಸುತ್ತಿದೆ.

ಶೋಧ ಕಾರ್ಯಾಚರಣೆಗಳು ಶಾಲೆ, ಹಳ್ಳಿ ಹಾಗೂ ಹಳ್ಳ,ಕೊಳ್ಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲಾಗಿದೆಯೆಂದು ಜಿಲ್ಲಾಧಿಕಾರಿ ಮೇಘಶ್ರೀ ಡಿ.ಆರ್. ವರದಿಗಾರರಿಗೆ ತಿಳಿಸಿದ್ದಾರೆ.

ಚಾಲಿಯಾರ್ ನದಿ ತಪ್ಪಲಿನಲ್ಲಿ ಭೂಕುಸಿತ ಸಂಭವಿಸಿದ ಸ್ಥಳಗಳಲ್ಲಿ ಸಿಲುಕಿಕೊಂಡಿರುವ ಸ್ವಯಂಸೇವಕರನ್ನು ರಕ್ಷಿಸುವ ಕಾರ್ಯಾಚರಣೆಯೂ ನಡೆಯುತ್ತಿದೆಯೆಂದವರು ಹೇಳಿದ್ದಾರೆ.

ಸ್ಥಳೀಯ ಸ್ವಯಂಸೇವಕರನ್ನು ಪರಿಹಾರ ಕಾರ್ಯಾಚರಣೆಗಳಿಂದ ದೂರವಿಡಲು ನಿರ್ಧರಿಸಲಾಗಿದೆ ಹಾಗೂ ಈ ಪ್ರದೇಶಗಳಿಗೆ ಪೊಲೀಸ್

ವಿಶೇಷ ರಕ್ಷಣಾ ದಳ (ಎಸ್‌ಓಜಿ ) ಹಾಗೂ ಸೇನಾ ಕಮಾಂಡೊಗಳನ್ನು ಈ ಪ್ರದೇಶಗಳಿಗೆ ಪ್ಯಾರಾಚ್ಯೂಚ್ ಮೂಲಕ ಇಳಿಸಲಾಗುವುದು. ಯಾವುದೇ ಮೃತದೇಹಗಳು ಪತ್ತೆಯಾದಲ್ಲಿ ಅವುಗಳನ್ನು ಏರ್‌ಲಿಫ್ಟ್ ಮಾಡಲಾಗುವುದು ಎಂದು ಅಜಿತ್‌ಕುಮಾರ್ ತಿಳಿಸಿದ್ದಾರೆ.

ವಯನಾಡ್ ಭೂಕುಸಿತ ದುರಂತದ ಶೋಧ ಕಾರ್ಯಾಚರಣೆಗಲು ಕೊನೆಯ ಹಂತವನ್ನು ತಲುಪಿದೆ. 50 ಮೀಟರ್‌ಗಳಷ್ಟು ಅಳದವರೆಗೆ ಕೆಸರುಮಣ್ಣಿನ ರಾಶಿ ಹರಡಿರುವ ಪ್ರದೇಶಗಳಲ್ಲಿ ಶೋಧ ನಡೆಯುತ್ತಿದೆ ಎಂದವರು ಹೇಳಿದ್ದಾರೆ. ಇಂತಹ ಸ್ಥಳಗಳಿಗೆ ರಕ್ಷಣಾ ಕಾರ್ಯಕರ್ತರನ್ನು ಹಾಗೂ ಭಾರೀ ಗಾತ್ರದ ಯಂತ್ರಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲವೆಂದವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News