ಆಗಸ್ಟ್ ನಲ್ಲಿ 74 ಲಕ್ಷ ಖಾತೆಗಳನ್ನು ನಿಷೇಧಿಸಿದ ವ್ಯಾಟ್ಸ್ ಆ್ಯಪ್

Update: 2023-10-02 14:36 GMT

                                                                      ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಮಾಹಿತಿ ತಂತ್ರಜ್ಞಾನದ ನಿಯಮಗಳಿಗೆ ಅನುಗುಣವಾಗಿ ಮೆಟಾ ಮಾಲಿಕತ್ವದ ವ್ಯಾಟ್ಸ್ ಆ್ಯಪ್ ಆಗಸ್ಟ್ ನಲ್ಲಿ 74 ಲಕ್ಷ ಖಾತೆಗಳನ್ನು ನಿಷೇಧಿಸಿದೆ ಎಂದು ವ್ಯಾಟ್ಸ್ ಆ್ಯಪ್ ನ ಭಾರತದ ಕುರಿತ ಇತ್ತೀಚೆಗಿನ ತಿಂಗಳ ವರದಿ ತಿಳಿಸಿದೆ.

ಇದರಲ್ಲಿ 35 ಲಕ್ಷ ಖಾತೆಗಳನ್ನು ಬಳಕೆದಾರರಿಂದ ಯಾವುದೇ ದೂರು ಬಾರದೇ ಇದ್ದರೂ ಕಂಪೆನಿ ಪೂರ್ವಭಾವಿಯಾಗಿ ನಿಷೇಧಿಸಿದೆ.

ಸ್ವೀಕರಿಸಲಾದ ಬಳಕೆದಾರರ ದೂರುಗಳು, ಅದಕ್ಕೆ ವ್ಯಾಟ್ಸ್ ಆ್ಯಪ್ ಕೈಗೊಂಡ ಕ್ರಮಗಳು, ವ್ಯಾಟ್ಸ್ ಆ್ಯಪ್ ನಲ್ಲಿ ನಿಂದನೆ ವಿರುದ್ಧ ಪ್ರತಿಬಂಧಕಾತ್ಮಕ ಕ್ರಮಗಳನ್ನು ತೆಗೆದುಕೊಂಡಿರುವ ವಿವರಗಳನ್ನು ಬಳಕೆದಾರರ ಸುರಕ್ಷಾ ವರದಿ ಒಳಗೊಂಡಿದೆ.

“ಆಗಸ್ಟ್ 1 ಹಾಗೂ 31ರ ನಡುವೆ ಒಟ್ಟು 7,420,748 ವ್ಯಾಟ್ಸ್ ಆ್ಯಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಇವುಗಳಲ್ಲಿ 3,506,905 ಖಾತೆಗಳನ್ನು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ’’ ಎಂದು ಅದು ತಿಳಿಸಿದೆ. ದೂರವಾಣಿ ಸಂಖ್ಯೆಯ ಕೋಡ್ +91ರ ಮೂಲಕ ಭಾರತದ ಖಾತೆಗಳನ್ನು ಗುರುತಿಸಲಾಗಿದೆ.  

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News