ಹರ್ಯಾಣ ಚುನಾವಣಾ ಅಖಾಡದಲ್ಲಿ ಅಹಿರ್ವಾಲ್ ಪ್ರದೇಶ ಬಿಜೆಪಿಗೆ ಯಾಕೆ ಪ್ರಾಮುಖ್ಯ?

Update: 2024-10-08 05:54 GMT

Photo: PTI

ಹರ್ಯಾಣ: ಹರ್ಯಾಣ ವಿಧಾನಸಭೆ ಚುನಾವಣೆಯ ಆರಂಭಿಕ ಮತ ಎಣಿಕೆಯು ಅಹಿರ್ವಾಲ್ ಪ್ರದೇಶಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿಯು ಹೆಚ್ಚು ಮುನ್ನಡೆ ಸಾಧಿಸಿರುವುದನ್ನು ತೋರಿಸುತ್ತಿದ್ದು, ಈ ಪ್ರದೇಶದಲ್ಲಿ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ.

ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ರಾವ್ ಇಂದ್ರಜಿತ್ ಸಿಂಗ್ ಅಹಿರ್ವಾಲ್ ಈ ಪ್ರದೇಶದ ಪ್ರಭಾವಿ ನಾಯಕರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾವ್ ಇಂದರ್ಜಿತ್ ಸಿಂಗ್ ಆರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಅವರು ಅಹಿರ್ವಾಲ್ ಪ್ರದೇಶದಲ್ಲಿ ಪಕ್ಷವನ್ನು ಮುನ್ನಡೆಸಿದ್ದರು. ಈ ಪ್ರದೇಶದಲ್ಲಿ ಅವರ ಬೆಂಬಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ದಕ್ಷಿಣ ಹರ್ಯಾಣದ ಅಹಿರ್ವಾಲ್ ಪ್ರದೇಶವು ಗುರ್ಗಾಂವ್, ರೇವಾರಿ, ಫರಿದಾಬಾದ್ ಮತ್ತು ಭಿವಾನಿ-ಮಹೇಂದರ್ಗಢ್ ಲೋಕಸಭಾ ಸ್ಥಾನಗಳನ್ನು ಒಳಗೊಂಡಿದೆ. ಈ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 28 ವಿಧಾನಸಭಾ ಸ್ಥಾನಗಳಿವೆ.

2014ರಲ್ಲಿ ಬಿಜೆಪಿ 15 ಸ್ಥಾನ ಗಳಿಸಿತ್ತು. 2019ರ ಚುನಾವಣೆಯಲ್ಲಿ ಹರ್ಯಾಣದಲ್ಲಿ ಬಿಜೆಪಿ ಒಟ್ಟು 47 ಕ್ಷೇತ್ರಗಳಿಂದ 40ಕ್ಕೆ ಇಳಿದಾಗಲೂ ಅಹಿರ್ವಾಲ್ ಪ್ರದೇಶದಲ್ಲಿ 16 ಸ್ಥಾನಗಳನ್ನು ಗೆದ್ದಿದೆ. ಆದ್ದರಿಂದ ಈ ಬಾರಿಯೂ ಈ ಪ್ರದೇಶ ಬಿಜೆಪಿಗೆ ಹೆಚ್ಚು ಪ್ರಾಮುಖ್ಯವಾಗಿದೆ.

ಚುನಾವಣಾ ಪ್ರಚಾರದ ಸಮಯದಲ್ಲಿ, ಭೂಪಿಂದರ್ ಸಿಂಗ್ ಹೂಡಾ ಅಧಿಕಾರದಲ್ಲಿಈ ಪ್ರದೇಶದ ಬಗ್ಗೆ ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಬಿಜೆಪಿ ಮತದಾರರ ಮನವೊಲಿಸಲು ಪ್ರಯತ್ನಿಸಿದೆ. ರಾಜ್ಯದ ಬೊಕ್ಕಸಕ್ಕೆ ಗುರುಗ್ರಾಮ್ ನಿಂದ ಹೆಚ್ಚಿನ ಆದಾಯ ಬರುತ್ತಿದ್ದರು ಕಾಂಗ್ರೆಸ್ ನಿರ್ಲಕ್ಷಿಸಿದೆ ಎಂದು ಬಿಜೆಪಿ ಆರೋಪಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News