ನರೇಂದ್ರ ಮೋದಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ʼಪೂರ್ಣ ಹುಮ್ಮಸ್ಸಿನಿಂದʼ ಭಾಗವಹಿಸಿ: ತನ್ನ ವಿದ್ಯಾರ್ಥಿಗಳಿಗೆ ಐಐಟಿ ಖರಗಪುರ್‌ ಕರೆ

Update: 2024-08-08 16:20 IST
ನರೇಂದ್ರ ಮೋದಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ʼಪೂರ್ಣ ಹುಮ್ಮಸ್ಸಿನಿಂದʼ ಭಾಗವಹಿಸಿ: ತನ್ನ ವಿದ್ಯಾರ್ಥಿಗಳಿಗೆ ಐಐಟಿ ಖರಗಪುರ್‌ ಕರೆ

Photo credit: telegraphindia.com

  • whatsapp icon

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ 74ನೇ ಜನ್ಮದಿನಾಚರಣೆಯ ಅಂಗವಾಗಿ ಸೆಂಟರ್‌ ಫಾರ್‌ ನರೇಂದ್ರ ಮೋದಿ ಸ್ಟಡೀಎಸ್‌ ಎಂಬ ಸಂಸ್ಥೆ “ಭಾರತದ ಜಾಗತಿಕ ಸಂಬಂಧಗಳನ್ನು ಪ್ರಧಾನಿ ನರೇಂದ್ರ ಮೋದಿ ಹೇಗೆ ಬಲಪಡಿಸಿದರು,” ಎಂಬ ವಿಷಯದ ಕುರಿತಂತೆ ಏರ್ಪಡಿಸಿರುವ ಪ್ರಬಂಧ ಸ್ಪರ್ಧೆಯಲ್ಲಿ ಸಂಪೂರ್ಣ ಹುಮ್ಮಸ್ಸಿನಿಂದ ಭಾಗವಹಿಸುವಂತೆ ಐಐಟಿ ಖರಗಪುರ್‌ ತನ್ನ ವಿದ್ಯಾರ್ಥಿಗಳಿಗೆ ಕರೆ ನೀಡಿದೆ ಎಂದು telegraphindia.com ವರದಿ ಮಾಡಿದೆ.

ಐಐಟಿ ಖರಗಪುರ್‌ನ ವಿದ್ಯಾರ್ಥಿ ಸಂಘಟನೆಯಾದ ಟೆಕ್ನಾಲಜಿ ಸ್ಟೂಡೆಂಟ್ಸ್‌ ಜಿಮ್‌ಖಾನಾ ಪರವಾಗಿ ವಿದ್ಯಾರ್ಥಿಗಳಿಗೆ ಇಮೇಲ್‌ ಕಳುಹಿಸಲಾಗಿದೆ. ಈ ಅಖಿಲ ಭಾರತ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಸಂಸ್ಥೆ ಬಯಸಿದೆ. ಇಂಗ್ಲಿಷ್‌ ಅಥವಾ ಇತರ 13 ಮಾನ್ಯ ಭಾರತೀಯ ಭಾಷೆಗಳಲ್ಲಿ ಯಾವುದರಲ್ಲೊಂದಾದರೂ 750-800 ಪದಗಳ ಪ್ರಬಂಧ ಸಲ್ಲಿಸಬೇಕೆಂದು ಇಮೇಲ್‌ನಲ್ಲಿ ತಿಳಿಸಲಾಗಿದೆಯಲ್ಲದೆ ವಿದ್ಯಾರ್ಥಿಗಳು ಪೂರ್ಣ ಹುಮ್ಮಸ್ಸಿನಿಂದ ಭಾಗವಹಿಸಿ ಪ್ರಥಮ ಸ್ಥಾನ ಪಡೆಯಬೇಕೆಂದು ಸಂಸ್ಥೆಯ ನಿರ್ದೇಶಕರು ಬಯಸಿದ್ದಾರೆ ಎಂದು ಇಮೇಲ್‌ ತಿಳಿಸಿದೆ.

ಈ ಸ್ಪರ್ಧೆಯ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಸೆಂಟರ್‌ ಫಾರ್‌ ನರೇಂದ್ರ ಮೋದಿ ಸ್ಟಡೀಸ್‌ ಹೇಳಿದೆ ಎಂದು ಇಮೇಲ್‌ ತಿಳಿಸಿದೆ. ಪ್ರಬಂಧ ಕಳಿಸಲು ಆಗಸ್ಟ್‌ 30 ಅಂತಿಮ ದಿನಾಂಕ ಎಂಬ ಮಾಹಿತಿಯನ್ನೂ ನೀಡಲಾಗಿದೆ.

ಈ ಸೆಂಟರ್‌ ಫಾರ್‌ ನರೇಂದ್ರ ಮೋದಿ ಸ್ಟಡೀಸ್‌ ಎಂಬುದು ಒಂದು ಸ್ವತಂತ್ರ ಟ್ರಸ್ಟ್‌ ಎಂದು ತಿಳಿದು ಬಂದಿದ್ದು ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಸೆಪ್ಟೆಂಬರ್‌ 17, 2020ರಂದು ಸ್ಥಾಪನೆಯಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು ಪ್ರಬಂಧ ಸ್ಪರ್ಧೆ ಕುರಿತು ಮಾಹಿತಿ ನೀಡಿತ್ತು. ಈ ಸಂಬಂಧ ವಿದ್ಯಾರ್ಥಿಗಳಿಗೆ ಭಾಗವಹಿಸುವಂತೆ ಕೋರಲಾಗಿದೆ, ಎಂದು ಐಐಟಿ ಖರಗಪುರ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News