ಪಶ್ಚಿಮ ಬಂಗಾಳದಲ್ಲಿ ಪ್ರಚಂಡ ಬಹುಮತದತ್ತ ದೀದಿ

Update: 2016-05-19 08:31 GMT

ಕೊಲ್ಕತ್ತಾ , ಮೇ 19  ದೀದಿ ಮತ್ತೆ ಗೆಲುವಿನ ನಗೆ ಬೀರಿದ್ದಾರೆ. ಅದೂ ಸಣ್ಣ ಗೆಲುವಲ್ಲ. ಈಗಿನ ಟ್ರೆಂಡ್  ಇದೇ ರೀತಿ ಮುಂದುವರಿದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಪ್ರಚಂಡ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಮರಳಲಿದ್ದಾರೆ. ಅದೂ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳೊಂದಿಗೆ !
ಸದ್ಯ ಮಮತಾ ಪಕ್ಷ 209  ಸ್ಥಾನಗಳಲ್ಲಿ ಸ್ಪಷ್ಟ ಮುನ್ನಡೆ ಸಾಧಿಸಿದ್ದು ಎಡರಂಗ ಹಾಗು ಕಾಂಗ್ರೆಸ್ ಮೈತ್ರಿಕೂಟ ಕೇವಲ 77 ಸ್ಥಾನಗಳಲ್ಲಿ ಮುಂದಿದೆ. ಇದು ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಮಮತಾ ಅಭೂತಪೂರ್ವ ಗೆಲುವು ಸಾಧಿಸುವುದು ಖಚಿತವಾಗಿದೆ. 
ಶಾರದ ಚಿಟ್ ಫಂಡ್ ಹಗರಣ, ಕೊಲ್ಕತಾದಲ್ಲಿ ಬಿದ್ದ ಫ್ಲೈ ಒವರ್ ಮಮತಾ ಗೆಲುವಿನ ಓಟವನ್ನು ತಡೆಯುವಲ್ಲಿ ವಿಫ ಲವಾಗಿವೆ . ಎಡರಂಗ ಮತ್ತೊಮ್ಮೆ ಬಂಗಾಳದಲ್ಲಿ ಸೋಲು ಅನುಭವಿಸುವುದು ಖಚಿತವಾಗಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News