ಶ್ರೀಲಂಕಾ: ಸೈನಿಕರ ಬಂದೋಬಸ್ತ್‌ನಲ್ಲಿ ಮುಸ್ಲಿಮರ ಪ್ರಾರ್ಥನೆ

Update: 2019-04-26 16:34 GMT

ಕೊಲಂಬೊ, ಎ. 26: ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ಮುಸ್ಲಿಮರು ಶುಕ್ರವಾರ ಸೈನಿಕರ ಭಾರೀ ಬಂದೋಬಸ್ತ್‌ನಲ್ಲಿ ಪ್ರಾರ್ಥನೆ ನಡೆಸಿದ್ದಾರೆ.

ರವಿವಾರ ನಡೆದ ಸ್ಫೋಟಗಳ ಬಳಿಕ, ರಾಜಧಾನಿ ಕೊಲಂಬೊದಲ್ಲಿ ಭದ್ರತೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಮನೆಯಲ್ಲಿಯೇ ಶುಕ್ರವಾರದ ಪ್ರಾರ್ಥನೆಯನ್ನು ನಡೆಸುವಂತೆ ಸರಕಾರ ಕರೆ ನೀಡಿತ್ತಾದರೂ, ನೂರಾರು ಮುಸ್ಲಿಮರು ಕೊಲ್ಲುಪಿಟಿಯ ಜುಮ್ಮಾ ಮಸೀದಿಯಲ್ಲಿ ಜಮಾಯಿಸಿದರು. ಶ್ರೀಲಂಕಾಕ್ಕೆ ಶಾಂತಿ ಮರಳಲು ನೆರವು ನೀಡುವಂತೆ ಎಲ್ಲ ಧರ್ಮಗಳ ಜನರಿಗೆ ಈ ಪ್ರಾರ್ಥನೆಯ ವೇಳೆ ಮನವಿ ಮಾಡಲಾಯಿತು ಎಂದು ಅವರು ಹೇಳಿದ್ದಾರೆ.

‘‘ನಾವು ಕ್ರೈಸ್ತರು, ಬೌದ್ಧರು ಮತ್ತು ಹಿಂದೂಗಳೊಂದಿಗೆ ಕೆಲಸ ಮಾಡುತ್ತೇವೆ. ಬಾಂಬ್ ಸ್ಫೋಟಗಳು ನಮ್ಮೆಲ್ಲರಿಗೆ ಹಾಕಿದ ಬೆದರಿಕೆಯಾಗಿದೆ. ಕೆಲವೇ ಜನರು ಮಾಡಿದ ಕೃತ್ಯಗಳಿಂದಾಗಿ ನಮ್ಮ ಸುಂದರ ದೇಶಕ್ಕೆ ಈ ಪರಿಸ್ಥಿತಿ ಎದುರಾಗಿದೆ’’ ಎಂದು 28 ವರ್ಷದ ಸೇಲ್ಸ್‌ಮನ್ ರಯೀಸ್ ಉಲ್‌ಹಕ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News