ಟ್ರಂಪ್ ಸ್ವಾತಂತ್ರ್ಯ ದಿನಾಚರಣೆಗೆ 8 ಕೋಟಿ ರೂ. ವೆಚ್ಚ
Update: 2019-07-10 18:09 GMT
ವಾಶಿಂಗ್ಟನ್, ಜು. 10: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಅಮೆರಿಕ ಸ್ವಾತಂತ್ರ ದಿನಾಚರಣೆಗೆ ಸೇನೆಯು ಕನಿಷ್ಠ 1.2 ಮಿಲಿಯ ಡಾಲರ್ (ಸುಮಾರು 8.21 ಕೋಟಿ ರೂಪಾಯಿ) ಖರ್ಚು ಮಾಡಿದೆ ಎಂದು ರಕ್ಷಣಾ ಇಲಾಖೆ ಪೆಂಟಗನ್ ಮಂಗಳವಾರ ಹೇಳಿದೆ.
ಜುಲೈ 4ರಂದು ನಡೆದ ಸಮಾರಂಭಕ್ಕಾಗಿ ಟ್ಯಾಂಕ್ ಗಳು ಮತ್ತು ಇತರ ಸಲಕರಣೆಗಳನ್ನು ವಾಶಿಂಗ್ಟನ್‌ಗೆ ತರಲಾಗಿತ್ತು. ಎರಡು ಬ್ರಾಡ್ಲಿ ಯುದ್ಧ ಟ್ಯಾಂಕ್‌ಗಳ ನಡುವೆ ಸಮಾರಂಭಕ್ಕೆ ಆಗಮಿಸಿದ ಟ್ರಂಪ್, ಅಮೆರಿಕ ಸೇನೆಯ ಸಾಮರ್ಥ್ಯವನ್ನು ಕೊಂಡಾಡಿದ್ದರು.ಅಮೆರಿಕದ ಸ್ಥಾಪಕರು 1776ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ ಘೋಷಿಸಿದ ವಾರ್ಷಿಕ ದಿನವನ್ನು ಅಮೆರಿಕನ್ನರು ಜುಲೈ 4ರಂದು ಪ್ರತಿ ವರ್ಷ ಆಚರಿಸುತ್ತಿದ್ದಾರೆ.