ಫುಡ್ ಟ್ರಕ್ ಮೂಲಕ ಮುಂಬೈ ಜನತೆಗೆ ರೇಶನ್ ಕಿಟ್‌ಗಳನ್ನು ವಿತರಿಸಿದ ಸಲ್ಮಾನ್ ಖಾನ್

Update: 2020-05-20 08:54 GMT

 ಮುಂಬೈ,ಮೇ 20: ನಾಲ್ಕನೇ ಹಂತದ ಲಾಕ್‌ಡೌನ್ ವೇಳೆ ಬಡ ಜನರಿಗೆ ನೆರವಾಗುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ 'ಬೀಯಿಂಗ್ ಹ್ಯಾಂಗ್ರಿ ' ಫುಡ್ ಟ್ರಕ್ ವ್ಯವಸ್ಥೆಯ ಮೂಲಕ ರೇಶನ್ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.

 ಮುಂಬೈನಲ್ಲಿ ಆಹಾರಕ್ಕಾಗಿ ಪರದಾಡುತ್ತಿರುವ ಜನರಿಗೆ ನೆರವಾಗಲು ''ಬೀಯಿಂಗ್ ಹ್ಯಾಂಗ್ರಿ' ಎಂದು ಬರೆದಿರುವ ಟ್ರಕ್ ಬುಧವಾರ ಮುಂಬೈನ ಎಲ್ಲ ರಸ್ತೆಗಳಲ್ಲಿ ಓಡಾಡುತ್ತಿರುವುದು ಕಂಡುಬಂತು. ಸ್ವಯಂ ಸೇವಕರು ಪಡಿತರವಿರುವ ದೊಡ್ಡ ಬ್ಯಾಗ್‌ಗಳನ್ನು ಬಡ ಜನರಿಗೆ ವಿತರಿಸಿದರು. ಅಗತ್ಯ ವಸ್ತುಗಳನ್ನು ಪಡೆಯಲು ಟ್ರಕ್‌ನ ಮುಂದೆ ಜನರ ದೊಡ್ಡ ಸರದಿಸಾಲು ಕಂಡುಬಂದಿತು.

ಸಲ್ಮಾನ್ ಖಾನ್ ಆರಂಭಿಸಿರುವ ಫುಡ್ ಟ್ರಕ್ ನಗರದೆಲ್ಲೆಡೆ ಸಂಚರಿಸಿ ಅಗತ್ಯವಿರುವ ಜನರಿಗೆ ಆಹಾರ ಪೂರೈಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಸಲ್ಮಾನ್ ಖಾನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಟ್ರಕ್ ಮೂಲಕ ಆಹಾರ ಪೂರೈಸುವುದನ್ನು ಎಲ್ಲೂ ಪ್ರಸ್ತಾವಿಸಿಲ್ಲ. ಸಲ್ಮಾನ್ ಲಾಕ್‌ಡೌನ್ ಘೋಷಿಸಿದ ಬಳಿಕ ಪನ್ವೇಲ್‌ನಲ್ಲಿರುವ ಫಾರ್ಮ್ ಹೌಸ್‌ನಲ್ಲಿ ತನ್ನ ಅಳಿಯ ನಿರ್ವಾಣ್ ಖಾನ್ ಹಾಗೂ ಅವರ ಕುಟುಂಬ ಸದಸ್ಯರೊಂದಿಗೆ ಸಿಲುಕಿಕೊಂಡಿದ್ದಾರೆ. ಈ ಮೊದಲು 54ರಹರೆಯದ ನಟ ಸಲ್ಮಾನ್ 'ಅನ್ನಾದಾನ್ ಚಾಲೆಂಜ್'‌ನಲ್ಲಿ ಜನರೆಲ್ಲರೂ ಭಾಗವಹಿಸುವಂತೆ ವಿನಂತಿಸಿದ್ದರು. ಲಾಕ್‌ಡೌನ್‌ನಿಂದ ತುಂಬಾ ಸಮಸ್ಯೆಯಲ್ಲಿರುವವರಿಗೆ ದೇಣಿಗೆ ನೀಡುವಂತೆಯೂ ಕೋರಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News