ರೈತ ಮುಖಂಡರ ಮೇಲೆ ಬಿಜೆಪಿಗರಿಂದ ದಾಳಿ: ಟ್ವಿಟ್ಟರ್ ನಾದ್ಯಂತ 'ಲಷ್ಕರೇ ಆರೆಸ್ಸೆಸ್' ಟ್ರೆಂಡಿಂಗ್

Update: 2021-04-03 13:48 GMT

ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಮೇಲೆ ಬಿಜೆಪಿ-ಆರೆಸ್ಸೆಸ್ ಬೆಂಬಲಿಗರು ದಾಳಿ ನಡೆಸುತ್ತಿದ್ದಾರೆಂದು ರೈತ ನಾಯಕ ರಾಕೇಶ್‌ ಟಿಕಾಯತ್‌ ಆರೋಪಿಸಿದ ಬೆನ್ನಲ್ಲೇ ಇದೀಗ ಸಾಮಾಜಿಕ ತಾಣ ಟ್ವಿಟರ್‌ ನಲ್ಲಿ ʼಲಷ್ಕರೇ ಆರೆಸ್ಸೆಸ್‌ʼ ಟ್ರೆಂಡಿಂಗ್‌ ಆಗಿದೆ. ಈಗಾಗಲೇ 1,25,000 ಕ್ಕೂ ಹೆಚ್ಚು ಹ್ಯಾಶ್‌ ಟ್ಯಾಗ್‌ ಗಳು ಟ್ವಿಟರ್‌ ನಾದ್ಯಂತ ಹರಿದಾಡಿವೆ.

ಟ್ರೆಂಡ್‌ ಪ್ರಾರಂಭಿಸಿರುವ ಕಿಸಾನ್‌ ಏಕ್ತಾ ಮೋರ್ಚ, "ಭಾರತದ ಪ್ರಜಾಪ್ರಭುತ್ವ ಸಾಯುವ ಹಂತದಲ್ಲಿದೆ. ಇಲ್ಲಿ ರೈತರ ಮತ್ತು ಕೇಂದ್ರ ಸರಕಾರದ ನಡುವೆ ಹೋರಾಟವಿದೆಯೇ ಹೊರತು ಧರ್ಮಗಳ ನಡುವೆಯಲ್ಲ. ಆದರೂ, ಆರೆಸ್ಸೆಸ್‌ ಮತ್ತು ಬಿಜೆಪಿ ದ್ವೇಷ ಹರಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ. ರೈತರ ಮೇಲೆ ಹಲ್ಲೆಗೈಯಲು ಭೀಕರ ಮಾರ್ಗಗಳನ್ನು ಅನುಸರಿಸುವುದು ಯಾವತ್ತೂ ಸಮರ್ಥನೀಯವಲ್ಲ" ಎಂದು ಟ್ವೀಟ್‌ ಮಾಡಿದೆ.

ಭಾರತವನ್ನು ಹಿಂದೂರಾಷ್ಟ್ರವನ್ನಾಗಿ ಮಾಡುವುದು ಮತ್ತು ವೈವಿಧ್ಯಮಯ ಭಾರತದ ಕಲ್ಪನೆಯನ್ನು ಕೊಲ್ಲುವುದು ಬಿಜೆಪಿ ಮತ್ತು ಆರೆಸ್ಸೆಸ್ ಕಾರ್ಯಸೂಚಿಯಾಗಿದೆ. ಅವರು ಈ ಆಲೋಚನೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಅಲ್ಪಸಂಖ್ಯಾತರನ್ನು ದಬ್ಬಾಳಿಕೆ ಮಾಡುತ್ತಿದ್ದಾರೆ. ಅವರ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಉಸಿರುಗಟ್ಟಿಸುವುದರಿಂದ ಅವರು ಭಾರತವನ್ನು ತೊರೆಯಬಹುದು. ಇದು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ಹೊಸ ಭಾರತ ಎಂದು ಪಂಜಾಬ್‌ ಶಾಸಕ ಸುಖ್‌ ಪಾಲ್‌ ಸಿಂಗ್‌ ಖೈರಾ ಟ್ವೀಟ್‌ ಮಾಡಿದ್ದಾರೆ.

"ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಆರೆಸ್ಸೆಸ್‌ ನಿಷೇಧಿಸಬೇಕು" ಎಂದು ಬಳಕೆದಾರರೋರ್ವರು ಟ್ವೀಟ್‌ ಮಾಡಿದ್ದಾರೆ.  ದೇಶದ ಬಹುತ್ವವನ್ನು ನಾಶಪಡಿಸುತ್ತಿರುವ ಕುರಿತಂತೆ ಹಲವಾರು ಮಂದಿ ಆರೆಸ್ಸೆಸ್‌ ಮತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲವು ಟ್ವೀಟ್‌ ಗಳು ಈ ಕೆಳಗಿನಂತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News