ಡ್ರಗ್ ಪ್ರಕರಣ: ಆರ್ಯನ್ ಖಾನ್ ಒಂದು ದಿನ ಎನ್‌ಸಿಬಿ ಕಸ್ಟಡಿಗೆ
Update: 2021-10-03 15:43 GMT
ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ಶಾರೂಖ್ ಖಾನ್ ಅವರ ಪುತ್ರ ಆರ್ಯನ್ ಹಾಗೂ ಇತರ ಇಬ್ಬರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಕ್ಟೋಬರ್ 4ರ ತನಕ ಎನ್‌ಸಿಬಿ ವಶಕ್ಕೆ ಒಪ್ಪಿಸಿದೆ.
ತನಿಖೆಗಾಗಿ ತಮ್ಮ ವಶಕ್ಕೆ ನೀಡುವಂತೆ ಎನ್‌ಸಿಬಿ ಪರ ವಕೀಲರಾದ ಅದ್ವೈತ್ ಸೆಥ್ನಾ ವಾದಿಸಿದರು. ಜಾಮೀನು ನೀಡಬಹುದಾದ ಅಪರಾಧಕ್ಕೆ ಪೊಲೀಸ್ ರಿಮ್ಯಾಂಡ್ ಅನ್ಯಾಯವಾಗಿದೆ ಎಂದು ಖಾನ್ ಪರ ವಕೀಲ ಎಸ್.ಮಾನೆಶಿಂಧೆ ಪ್ರತಿವಾದಿಸಿದರು.
ಇಂತಹ ತಪ್ಪು ಚಟುವಟಿಕೆಗಳಲ್ಲಿ ಭಾಗಿಯಾದವರು ಕಠಿಣ ಶಿಕ್ಷೆ ಎದುರಿಸಲಿದ್ದಾರೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಹೇಳಿದ್ದಾರೆ.