ಪಂಜಾಬ್ ಸಿಎಂ ವಿರುದ್ಧ ಬಿಹಾರ ನ್ಯಾಯಾಲಯದಲ್ಲಿ ದೂರು ದಾಖಲು

Update: 2022-02-17 12:25 GMT
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ (PTI)

ಮುಝಫ್ಫರಪುರ್: ಉತ್ತರ ಪ್ರದೇಶ ಮತ್ತು ಬಿಹಾರದ "ಭೈಯ್ಯಾಗಳ'' ಕುರಿತಂತೆ ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಚನ್ನಿ ಅವರು ನೀಡಿದ್ದಾರೆಂದು ಹೇಳಲಾಗಿರುವ `ಅವಮಾನಕಾರಿ ಹೇಳಿಕೆ'ಯನ್ನು ವಿರೋಧಿಸಿ  ಇಲ್ಲಿನ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಾಮಾಜಿಕ ಕಾರ್ಯಕರ್ತೆ ತಮನ್ನಾ ಹಾಶ್ಮಿ ದೂರು ದಾಖಲಿಸಿದ್ದಾರೆ.

ಪಂಜಾಬ್ ಮುಖ್ಯಮಂತ್ರಿಯ ಹೇಳಿಕೆಯು "ಪಂಜಾಬ್‌ನಲ್ಲಿ ವಾಸಿಸುತ್ತಿರುವ ಬಿಹಾರದ ಜನರ ಜೀವಗಳನ್ನು ಅಪಾಯಕ್ಕೆ ನೂಕಿದೆ,'' ಎಂದು  ದೂರಿನಲ್ಲಿ ಆರೋಪಿಸಲಾಗಿದೆ.

"ಉತ್ತರ ಪ್ರದೇಶ ಮತ್ತು ಬಿಹಾರದ ಭೈಯ್ಯಾಗಳಿಗೆ ತಮ್ಮ ರಾಜ್ಯದಲ್ಲಿ ಆಡಳಿತ ನಡೆಸಲು ಅನುಮತಿಸಲಾಗುವುದಿಲ್ಲ,'' ಎಂದು  ಇತ್ತೀಚೆಗೆ ಸಾರ್ವಜನಿಕ ರ‍್ಯಾಲಿಯೊಂದರಲ್ಲಿ ಚನ್ನಿ ಹೇಳಿದ್ದರು. ಅವರ ಈ ಹೇಳಿಕೆ ಇತರ ಪಕ್ಷಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಚನ್ನಿ ವಿರುದ್ಧ ಐಪಿಸಿಯ ಸೆಕ್ಷನ್ 294, 294ಎ, 504 ಮತ್ತು 511 ಅನ್ವಯ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕು ಎಂದು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದೂರಿನಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News