36 ಉಪಗ್ರಹಗಳನ್ನು ಹೊತ್ತ ರಾಕೆಟ್ ಉಡಾಯಿಸಿದ ಇಸ್ರೋ

Update: 2023-03-26 08:25 GMT

ಹೊಸದಿಲ್ಲಿ:  ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಬೆಳಗ್ಗೆ ಚೆನ್ನೈ ಸಮೀಪದ ಶ್ರೀಹರಿಕೋಟಾ ಬಾಹ್ಯಾಕಾಶ ನಿಲ್ದಾಣದಿಂದ 36 ಉಪಗ್ರಹಗಳನ್ನು ಹೊತ್ತ ರಾಕೆಟ್ ಅನ್ನು ಉಡಾವಣೆ ಮಾಡಿದೆ.

 OneWeb India-2 ಮಿಷನ್‌ನ ಭಾಗವಾಗಿ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣಾ ವಾಹನ ಮಾರ್ಕ್-III ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು.

ಇಂಗ್ಲೆಂಡ್ ನ  OneWeb ಗುಂಪಿಗೆ ಸೇರಿದ ಉಪಗ್ರಹಗಳನ್ನು ಭೂಮಿಯ ಕಕ್ಷೆಯಲ್ಲಿ ನಿಯೋಜಿಸಲಾಗುವುದು ಮತ್ತು ಕಂಪನಿಯು ಈ ವರ್ಷದ ನಂತರ ಜಾಗತಿಕ ಸೇವೆಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ.

ಈ ವರ್ಷ ಇಸ್ರೋ ನಡೆಸಿದ ಎರಡನೇ ರಾಕೆಟ್ ಉಡಾವಣೆ ಇದಾಗಿದೆ. ಈ ಉಡಾವಣೆಯೊಂದಿಗೆ, OneWeb ತನ್ನ 616 ಉಪಗ್ರಹಗಳನ್ನು ಕಕ್ಷೆಯಲ್ಲಿ ಹೊಂದಿರುತ್ತದೆ.

Similar News