2002 ರ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣ: ಎಲ್ಲಾ 26 ಆರೋಪಿಗಳನ್ನು ಖುಲಾಸೆಗೊಳಿಸಿದ ಗುಜರಾತ್ ನ್ಯಾಯಾಲಯ
Update: 2023-04-02 06:11 GMT
ಗೋಧ್ರಾ: 2002ರಲ್ಲಿ ನಡೆದ ಕೋಮುಗಲಭೆಯ ವೇಳೆ ಕಲೋಲ್‌ನಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಹನ್ನೆರಡು ಮಂದಿಯ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆಗೈದ ಆರೋಪ ಹೊತ್ತಿದ್ದ ಎಲ್ಲ 26 ಮಂದಿಯನ್ನು ಗುಜರಾತ್‌ನ ನ್ಯಾಯಾಲಯವೊಂದು ಸಾಕ್ಷ್ಯಾಧಾರಗಳ ಕೊರತೆಯಿದೆ ಎಂದು ಹೇಳಿ ದೋಷಮುಕ್ತಗೊಳಿಸಿದೆ.
ಒಟ್ಟು 39 ಆರೋಪಿಗಳ ಪೈಕಿ 13 ಮಂದಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಾವನ್ನಪ್ಪಿದ್ದರು ಹಾಗೂ ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಲಾಯಿತು.
ಪಂಚಮಹಲ್ ಜಿಲ್ಲೆಯ ಹಲೋಲ್‌ನಲ್ಲಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಲೀಲಾಭಾಯಿ ಚುಡಾಸಮಾ ಅವರು ಶುಕ್ರವಾರ 26 ಜನರನ್ನು ಕೊಲೆ, ಸಾಮೂಹಿಕ ಅತ್ಯಾಚಾರ ಮತ್ತು ದಂಗೆಯ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಖುಲಾಸೆಗೊಳಿಸಿದರು.
"ಪ್ರಕರಣದ ಒಟ್ಟು 39 ಆರೋಪಿಗಳ ಪೈಕಿ 13 ಮಂದಿ ವಿಚಾರಣೆಯ ಬಾಕಿ ಇರುವಾಗ ಸಾವನ್ನಪ್ಪಿದ್ದಾರೆ" ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.