ಭಗತ್‌ ಸಿಂಗ್‌ ಪಾತ್ರದಲ್ಲಿ ನಟಿಸುವ ಬಯಕೆ ವ್ಯಕ್ತಪಡಿಸಿದ ರಾಜ್‌ಕುಮಾರ್‌ ರಾವ್

Update: 2023-08-19 19:31 IST
ಭಗತ್‌ ಸಿಂಗ್‌ ಪಾತ್ರದಲ್ಲಿ ನಟಿಸುವ ಬಯಕೆ ವ್ಯಕ್ತಪಡಿಸಿದ ರಾಜ್‌ಕುಮಾರ್‌ ರಾವ್

Photo: ರಾಜ್‍ಕುಮಾರ್ ರಾವ್ (Twitter \ @XingTang) | ಭಗತ್ ಸಿಂಗ್  

  • whatsapp icon

ಗನ್ಸ್ ಅಂಡ್ ಗುಲಾಬ್ಸ್ ನೆಟ್‍ಫ್ಲಿಕ್ಸ್ ಸೀರೀಸ್ ನಲ್ಲಿ ಮಿಂಚುತ್ತಿರುವ ನಟ ರಾಜ್‍ಕುಮಾರ್ ರಾವ್ ತಮ್ಮ ಕನಸಿನ ಪಾತ್ರದ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಚಿತ್ರವೊಂದರಲ್ಲಿ ಭಗತ್ ಸಿಂಗ್ ಪಾತ್ರವನ್ನು ನಿರ್ವಹಿಸಲು ಬಯಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ. ಈ ಪಾತ್ರವನ್ನು ಪಡೆಯಲು ಸಾಧ್ಯವಾದರೆ ಈ ಹಿಂದೆ ಯಾರೂ ಮಾಡಿದರ ರೀತಿಯಲ್ಲಿ ಈ ಪಾತ್ರವನ್ನು ನಿಭಾಯಿಸುವುದಾಗಿ ಭರವಸೆ ನೀಡಿದ್ದಾರೆ. ವೆಬ್ ಸೀರೀಸ್ ನಲ್ಲಿ ಅವರು ಈ ಹಿಂದೆ ಸುಭಾಸ್‍ಚಂದ್ರ ಬೋಸ್ ಪಾತ್ರವನ್ನು ನಿರ್ವಹಿಸಿದ್ದರು.

‘ಭಗತ್ ಸಿಂಗ್’, ‘23 ಮಾರ್ಚ್ 1931’, ‘ಶಹೀದ್’, ‘ರಂಗ್ ದೇ ಬಸಂತಿ’ ಹೀಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನದ ಬಗ್ಗೆ ಹಲವು ಚಿತ್ರಗಳು ಬಾಲಿವುಡ್‍ನಲ್ಲಿ ನಿರ್ಮಾಣಗೊಂಡಿವೆ. ಇದೀಗ ರಾಜ್‍ಕುಮಾರ್ ರಾವ್ ಹೊಸ ಪಾತ್ರ ನಿರ್ವಹಿಸುವ ಬಗ್ಗೆ ವರದಿಗಳಿದ್ದರೂ, ಯಾವುದೂ ದೃಢಪಟ್ಟಿಲ್ಲ. ಭಾರತದ ಇತಿಹಾಸದಲ್ಲಿ ದಂತಕಥೆ ಎನಿಸಿದ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಅಪಾರ ಪ್ರೀತಿ ಹೊಂದಿರುವುದಾಗಿ ‘ಪಿಂಕ್‍ವಿಲ್ಲಾ’ಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.

"ಭಗತ್ ಸಿಂಗ್ ಬಗ್ಗೆ ನನಗೆ ಅತೀವ ಪ್ರೀತಿ ಇದೆ. ಅವರನ್ನು ಈ ಹಿಂದೆ ನೀವೆಂದೂ ನೋಡಿರದ ರೀತಿಯಲ್ಲಿ ಪರದೆಯ ಮೇಲೆ ಬಿಂಬಿಸಲು ಅಪಾರ ಒಲವು ಇದೆ" ಎಂದು ಅವರು ಸ್ಪಷ್ಟಪಡಿಸಿದ್ದಾರೆ. "ಆದರೆ ನಾನು ಭಗತ್ ಸಿಂಗ್ ಪಾತ್ರ ಪಡೆದರೆ, ಅವರ ಬದುಕಿನ ಭಿನ್ನ ಅಂಶವನ್ನು ತೆಗೆದುಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News