ಮುಹಮ್ಮದ್ ಅಫ್‌ಝಲ್ ನಿಧನ

Update: 2023-09-24 16:50 GMT

ಮಂಗಳೂರು, ಸೆ.24: ನಗರದ ಬಂದರ್ ಚೆರೆಪಾಂಡೇಲ್ ಮನೆತನದ ಸದಸ್ಯ ಮುಹಮ್ಮದ್ ಅಫ್‌ಝಲ್ (49) ರವಿವಾರ ಅಪರಾಹ್ನ ಹೃದಯಾಘಾತದಿಂದ ನಿಧನರಾದರು.

ಮೃತರು ಪತ್ನಿ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ನಗರದ ಬಲ್ಮಠದ ಆರ್ಯ ಸಮಾಜ ರಸ್ತೆಯ ಮನೆಯಲ್ಲಿ ವಾಸವಾಗಿದ್ದ ಅವರು ಇಂಟೀರಿಯರ್ ಕಾಂಟ್ರಾಕ್ಟರ್ ಆಗಿದ್ದರು. ರವಿವಾರ ಅಪರಾಹ್ನ ಕಂಕನಾಡಿ ಬಳಿಯ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

ಮೃತದೇಹವನ್ನು ಬಂದರ್‌ನ ಚೆರೆಪಾಂಡೇಲ್ ಮನೆಯಲ್ಲಿಡಲಾಗಿದ್ದು, ಸೋಮವಾರ ಬೆಳಗ್ಗೆ 10ಕ್ಕೆ ಬಂದರ್ ಕೇಂದ್ರ ಜುಮಾ ಮಸೀದಿಯ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News

ಹಸೈನಾರ್