ಜರ್ಮನಿ: ಮನರಂಜನೆಗೆ ಗಾಂಜಾ ಬಳಕೆ ಕಾನೂನುಬದ್ಧಗೊಳಿಸುವ ವಿವಾದಾತ್ಮಕ ಮಸೂದೆ ಅಂಗೀಕಾರ

Update: 2023-08-16 18:27 GMT

ಸಾಂದರ್ಭಿಕ ಚಿತ್ರ

ಬರ್ಲಿನ್: ಜರ್ಮನಿಯ ಸಂಪುಟ ಬುಧವಾರ ಮನರಂಜನೆಗೆ ಗಾಂಜಾ ಬಳಕೆ ಮತ್ತು ಕೃಷಿಯನ್ನು ಕಾನೂನುಬದ್ಧಗೊಳಿಸುವ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಿದೆ. ಇದು ಮಾದಕ ವಸ್ತು ಗಾಂಜದ ಕುರಿತ ಕಾನೂನುಗಳನ್ನು ಉದಾರಗೊಳಿಸುವ ವಿಶ್ವದಾದ್ಯಂತ ಪ್ರವೃತ್ತಿಗೆ ಮತ್ತಷ್ಟು ವೇಗವನ್ನು ನೀಡಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಇದೀಗ ಈ ಮಸೂದೆಯನ್ನು ಸಂಸತ್ನಲ್ಲಿ ಸರಕಾರ ಮಂಡಿಸಲಿದೆ. ಸಂಸತ್ ಅನುಮೋದನೆ ದೊರಕಿದರೆ ವಯಸ್ಕರು ತಮ್ಮ ಬಳಿ 25 ಗ್ರಾಂನಷ್ಟು ಗಾಂಜ ಇರಿಸಿಕೊಳ್ಳಲು, ಗರಿಷ್ಟ 3 ಸಸ್ಯಗಳನ್ನು ಬೆಳೆಯಲು ಅಥವಾ ಮನರಂಜನಾ ಕ್ಲಬ್ಗಳಲ್ಲಿ ಗಾಂಜ ಬಳಸಲು ಅವಕಾಶ ದೊರೆಯಲಿದೆ. ಈ ಮಸೂದೆಗೆ ಕಾಯ್ದೆಯ ರೂಪ ದೊರೆತರೆ ಗಾಂಜ ಕಳ್ಳಸಾಗಣೆ ಜಾಲಕ್ಕೆ ಹೊಡೆತ ಬೀಳಲಿದೆ ಮತ್ತು ಕಲುಷಿತ ಗಾಂಜ ಬಳಕೆಯಿಂದ ಗ್ರಾಹಕರನ್ನು ರಕ್ಷಿಸುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲಿದೆ.

ಈ ಮಸೂದೆಗೆ ಸಂಸತ್ ಅನುಮೋದನೆ ನೀಡಿದರೆ ಮಾದಕ ವಸ್ತು ಕುರಿತ ಅತ್ಯಂತ ಉದಾರ ನೀತಿ ಹೊಂದಿರುವ ಯುರೋಪ್ನ ದೇಶವಾಗಿ ಜರ್ಮನಿ ಗುರುತಿಸಿಕೊಳ್ಳಲಿದೆ. ಆದರೆ ಮಸೂದೆಯ ಬಗ್ಗೆ ವಿರೋಧ ಪಕ್ಷಗಳಿಂದ ಟೀಕೆ ಮತ್ತು ವಿರೋಧ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News