ರಶ್ಯ: 22 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ

Update: 2024-08-31 13:59 IST
ರಶ್ಯ: 22 ಜನರಿದ್ದ ಹೆಲಿಕಾಪ್ಟರ್ ನಾಪತ್ತೆ

ಸಾಂದರ್ಭಿಕ ಚಿತ್ರ (PTI)

  • whatsapp icon

ಮಾಸ್ಕೊ: 22 ಜನರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಶನಿವಾರದಂದು ರಶ್ಯಾದ ಪೂರ್ವ ಭಾಗದಲ್ಲಿ ಕಣ್ಮರೆಯಾಗಿದೆ ಎನ್ನಲಾಗಿದ್ದು ಹೆಲಿಕಾಪ್ಟರ್‌ಗಾಗಿ ಹುಡುಕಾಟ ನಡೆಯುತ್ತಿದೆ.

Mi-8 ಹೆಲಿಕಾಪ್ಟರ್ ಕಮ್ಚಾಟ್ಕಾ ಪ್ರದೇಶದ ವಾಚ್ಕಾಜೆಟ್ಸ್ ಜ್ವಾಲಾಮುಖಿಯ ಸಮೀಪದಿಂದ ಟೇಕ್ ಆಫ್ ಆಗಿತ್ತು. ಆದರೆ ನಿಗದಿತವಾಗಿ ತಲುಪಬೇಕಿದ್ದ ಪ್ರದೇಶವನ್ನು ತಲುಪಲಿಲ್ಲ ಎಂದು ರಷ್ಯಾದ ಫೆಡರಲ್ ಏರ್ ಟ್ರಾನ್ಸ್ಪೋರ್ಟ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.

ಹೆಲಿಕಾಪ್ಟರ್ ನಲ್ಲಿ 19 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಇದ್ದರು ಎಂದು ನಂಬಲಾಗಿದೆ.

Mi-8, 1960 ರ ದಶಕದಲ್ಲಿ ವಿನ್ಯಾಸಗೊಳಿಸಲಾದ ಎರಡು ಎಂಜಿನ್ ಹೆಲಿಕಾಪ್ಟರ್ ಆಗಿದೆ. ಇದನ್ನು ರಷ್ಯಾದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News