ಗಾಝಾ ಪುನರ್‌ ನಿರ್ಮಿಸಲು ರಾಷ್ಟ್ರೀಯ ತಂಡ: ಫೆಲೆಸ್ತೀನ್ ಪ್ರಧಾನಿ ಘೋಷಣೆ

Update: 2024-10-08 15:01 GMT

ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಮುಸ್ತಫಾ | PC : wikipedia.org

ರಮಲ್ಲಾ : ಫೆಲೆಸ್ತೀನ್ ಪ್ರಧಾನಿ ಮುಹಮ್ಮದ್ ಮುಸ್ತಫಾ ಗಾಝಾವನ್ನು ಪುನರ್‌ ನಿರ್ಮಿಸಲು ರಾಷ್ಟ್ರೀಯ ತಂಡವನ್ನು ರಚಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.

ರಮಲ್ಲಾದಲ್ಲಿ ಟಿವಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದೇಶವು ಈಗಾಗಲೇ ಗಾಝಾದಲ್ಲಿ 4 ಲಕ್ಷಕ್ಕೂ ಹೆಚ್ಚು ಜನರಿಗೆ ನೆರವನ್ನು ಒದಗಿಸಿದೆ ಮತ್ತು ಇದನ್ನು ಮುಂದುವರಿಸಲಿದೆ ಎಂದರು. ಗಾಝಾ ಪಟ್ಟಿಯ ಪುನರ್ನಿರ್ಮಾಣಕ್ಕೆ ಸುಮಾರು 50 ಶತಕೋಟಿ ಡಾಲರ್ ವೆಚ್ಚವಾಗಬಹುದು ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ(ಯುಎನ್‍ಡಿಪಿ) ಯೋಜನಾ ಅಧಿಕಾರಿ ಹೇಳಿದ್ದಾರೆ.

ಈ ಮಧ್ಯೆ, ಗಾಝಾದಲ್ಲಿ ಯಾವುದೇ ಸಂಭಾವ್ಯ ಕದನ ವಿರಾಮದ ನಂತರದ ನಿರ್ಣಾಯಕ ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿದ ಯುಎನ್‍ಡಿಪಿ ಅರಬ್ ರಾಷ್ಟ್ರಗಳ ಪ್ರಾದೇಶಿಕ ಕಚೇರಿಯ ನಿರ್ದೇಶಕ ಅಬ್ದುಲ್ಲಾ ಅಲ್-ದರ್ದಾರಿ `ಕದನ ವಿರಾಮ ಒಪ್ಪಂದದ ಬಳಿಕದ ದಿನ ಅತ್ಯಂತ ಅಪಾಯಕಾರಿ ಹಂತವಾಗಿದೆ. ಸ್ಥಳಾಂತರಿಸಲ್ಪಟ್ಟ ಜನರು ಹಾಗೂ ತಮ್ಮ ಮನೆಯನ್ನು ಕಳೆದುಕೊಂಡವರು ಪುನರ್ನಿರ್ಮಾಣ ಪ್ರಕ್ರಿಯೆಯ ಪ್ರಾರಂಭಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News