ಪಾಕಿಸ್ತಾನದ ಪ್ರಥಮ ಹಿಂದು ಪೊಲೀಸ್ ಅಧಿಕಾರಿಯಾಗಿ ಇತಿಹಾಸ ಬರೆದ ರಾಜೇಂದರ್
Update: 2024-12-09 16:49 GMT
ಇಸ್ಲಾಮಾಬಾದ್ : ಪಾಕಿಸ್ತಾನದ ಅಲ್ಪಸಂಖ್ಯಾತ ಹಿಂದು ಸಮುದಾಯದ ರಾಜೇಂದರ್ ಮೇಘಾವರ್ ಪಾಕಿಸ್ತಾನ್ ಪೊಲೀಸ್ ಸೇವೆಯಲ್ಲಿ ಮೊದಲ ಹಿಂದು ಅಧಿಕಾರಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿರುವುದಾಗಿ ವರದಿಯಾಗಿದೆ.
ರಾಜೇಂದರ್‍ರನ್ನು ಫೈಸಲಾಬಾದ್‍ನ ಗುಲ್ಬರ್ಗ್ ಪ್ರದೇಶದ ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್(ಎಎಸ್‍ಪಿ) ಆಗಿ ನೇಮಕಗೊಳಿಸಿದ್ದು ಅಧಿಕಾರ ಸ್ವೀಕರಿಸಿದ್ದಾರೆ ಎಂದು ವರದಿ ಹೇಳಿದೆ.