ಸಿರಿಯಾ | ಇಸ್ರೇಲ್ ದಾಳಿಯಲ್ಲಿ ಮೂವರು ನಾಗರಿಕರ ಮೃತ್ಯು

Update: 2024-10-01 14:55 GMT

PC : PTI (ಸಾಂದರ್ಭಿಕ ಚಿತ್ರ)

ದಮಾಸ್ಕಸ್ : ದಮಾಸ್ಕಸ್ ಮೇಲೆ ಮಂಗಳವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಮೂವರು ನಾಗರಿಕರು ಮೃತಪಟ್ಟಿರುವುದಾಗಿ ಮಿಲಿಟರಿ ಮೂಲಗಳನ್ನು ಉಲ್ಲೇಖಿಸಿ ಸಿರಿಯಾ ಸರಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.

ಶತ್ರುಗಳು ದಮಾಸ್ಕಸ್‍ನಲ್ಲಿ ಹಲವಾರು ಸ್ಥಳಗಳನ್ನು ಗುರಿಯಾಗಿಸಿಕೊಂಡು ಆಕ್ರಮಿತ ಸಿರಿಯನ್ ಗೋಲನ್ ಹೈಟ್ಸ್‍ ನ ದಿಕ್ಕಿನಿಂದ ಯುದ್ಧವಿಮಾನಗಳು ಮತ್ತು ಡ್ರೋನ್‍ನಿಂದ ವಾಯು ಆಕ್ರಮಣವನ್ನು ಆರಂಭಿಸಿದ್ದಾರೆ. ಮೂವರು ನಾಗರಿಕರು ಮೃತಪಟ್ಟಿದ್ದು ಇತರ 9 ಮಂದಿ ಗಾಯಗೊಂಡಿದ್ದಾರೆ ಎಂದು ಸನಾ ಸುದ್ದಿಸಂಸ್ಥೆ ವರದಿ ಮಾಡಿದೆ. ಸಿರಿಯಾ ರಾಜಧಾನಿ ದಮಾಸ್ಕಸ್‍ನಾದ್ಯಂತ ಸರಣಿ ಸ್ಫೋಟದ ಸದ್ದು ಕೇಳಿಬಂದಿದೆ. ಸಿರಿಯಾದ ಭದ್ರತಾ ಸಂಸ್ಥೆಯ ಕೇಂದ್ರಕಚೇರಿ ಮತ್ತು ರಾಯಭಾರ ಕಚೇರಿಗಳಿರುವ ಮೆಝೆ ನಗರದಲ್ಲಿ ವೈಮಾನಿಕ ದಾಳಿಯಿಂದ ಎರಡು ಮಿನಿ ಬಸ್ಸುಗಳು ಬೆಂಕಿಗೆ ಆಹುತಿಯಾಗಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News