ರಶ್ಯ | ನಾಪತ್ತೆಯಾಗಿದ್ದ ಹೆಲಿಕಾಪ್ಟರ್ ಅವಶೇಷ ಪತ್ತೆ: ಎಲ್ಲಾ 22 ಮಂದಿ ಸಾವು

Update: 2024-09-01 16:56 GMT

ಸಾಂದರ್ಭಿಕ ಚಿತ್ರ (PTI)

ಮಾಸ್ಕೋ : ಪೂರ್ವ ರಶ್ಯದ ಕಮ್ಚಾಟ್ಕಾ ಪರ್ಯಾಯ ದ್ವೀಪದಲ್ಲಿ ಶನಿವಾರ ನಾಪತ್ತೆಯಾಗಿದ್ದ ಹೆಲಿಕಾಪ್ಟರ್‍ ನ ಅವಶೇಷ ಪತ್ತೆಯಾಗಿದ್ದು ಹೆಲಿಕಾಪ್ಟರ್‍ನಲ್ಲಿದ್ದ ಎಲ್ಲರೂ ಮೃತಪಟ್ಟಿರುವುದು ಖಚಿತವಾಗಿದೆ ಎಂದು ಪ್ರಾದೇಶಿಕ ವಿಮಾನಯಾನ ಅಧಿಕಾರಿಗಳು ರವಿವಾರ ಹೇಳಿದ್ದಾರೆ.

19 ಪ್ರವಾಸಿಗರು ಮತ್ತು ಮೂವರು ಸಿಬ್ಬಂದಿಗಳಿದ್ದ ಎಂಐ-8 ಹೆಲಿಕಾಪ್ಟರ್ ಶನಿವಾರ ಟೇಕ್‍ಆಫ್ ಆದ ಕೆಲಕ್ಷಣಗಳಲ್ಲೇ ಸಂಪರ್ಕ ಕಡಿತಗೊಂಡು ನಾಪತ್ತೆಯಾಗಿತ್ತು. ಕಮ್ಚಾಟ್ಕಾ ಪ್ರಾಂತದಲ್ಲಿ 900 ಮೀಟರ್ ಎತ್ತರದ ಪರ್ವತ ಪ್ರದೇಶದಲ್ಲಿ ಹೆಲಿಕಾಪ್ಟರ್‍ ನ ಅವಶೇಷ ಪತ್ತೆಯಾಗಿದೆ. ಇದುವರೆಗೆ 17 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು ಹೆಲಿಕಾಪ್ಟರ್‍ನಲ್ಲಿದ್ದ ಯಾರೊಬ್ಬರೂ ಬದುಕುಳಿದಿರುವ ಸಾಧ್ಯತೆಯಿಲ್ಲ ಎಂದು ಕಮ್‍ಚಟ್ಕಾದ ಗವರ್ನರ್ ವ್ಲಾದಿಮಿರ್ ಸೊಲೊದೊವ್ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News