ಕಲಬುರಗಿ | ಜಿಲ್ಲಾ ಕೃಷಿಕ ಸಮಾಜ ತಂಡದಿಂದ ತೊಗರಿ ಹಾನಿ ವೀಕ್ಷಣೆ

Update: 2024-11-30 11:38 GMT

ಕಲಬುರಗಿ : ಆಳಂದ ತಾಲ್ಲೂಕಿನ ವಿವಿಧ ಗ್ರಾಮಗಳ, ರೈತರ ಹೊಲಗಳಿಗೆ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪೂರ ಅವರ ನೇತೃತ್ವದ ತಂಡವು ಒಣಗಿದ ತೊಗರಿ ಬೆಳೆ ಹಾನಿಯ ಕುರಿತು ವೀಕ್ಷಣೆ ನಡೆಸಿದರು.

ಆಳಂದ ತಾಲ್ಲೂಕಿನ ಖೇಡಉಮಾರ್ಗ, ಲಿಂಗದಳ್ಳಿ, ಘೋಘಾ, ಅಲ್ಲಾಪುರ್, ನೆಲ್ಲೂರು, ಲಾಡಚಿಂಚೋಳಿ, ಧುತ್ತರಗಾಂವ ಮತ್ತು ಅಳಂದ ವಲಯದ ಅನೇಕ ಗ್ರಾಮಗಳ ಹೊಲಗಳಿಗೆ ತಂಡವು ಭೇಟಿ ನೀಡಿ ಬೆಳೆ ಹಾನಿಯನ್ನು ವೀಕ್ಷಿಸಿ, ರೈತರ ಅಹವಾಲುಗಳನ್ನು ಆಲಿಸಿದರು.

ತಂಡದಲ್ಲಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ, ಆಳಂದ ತಾಲೂಕು ಕೃಷಿಕ ಸಮಾಜ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಅಫಜಲ್ಪುರ ತಾಲ್ಲೂಕು ಕೃಷಿಕ ಸಮಾಜ ಅಧ್ಯಕ್ಷ ಮಹಾಂತಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ, ರೈತ ಮಲ್ಲಪ್ಪ ಹತ್ತರಕಿ, ಆತ್ಮಾ ಯೋಜನೆ ಅಧಿಕಾರಿ ಸಂಜಯ ಸೌಧಿ ಒಳಗೊಂಡು ಸ್ಥಳೀಯ ರೈತರು ಇದ್ದರು.

ಸರಕಾರವು ತಕ್ಷಣವೇ ಹಾನಿಗೊಳಗಾದ ತೊಗರಿ ಬೆಳೆಗೆ ಪರಿಹಾರವನ್ನು ಒದಗಿಸಬೇಕೆಂದು ಸಿದ್ರಾಮಪ್ಪ ಪಾಟೀಲ್ ಒತ್ತಾಯಿಸಿದರು. ಅಲ್ಲದೆ, ಬೆಳೆ ವಿಮಾ ಯೋಜನೆ ಅಡಿಯಲ್ಲಿ ಪುರಸ್ಕೃತ ರೈತರಿಗೆ ತುರ್ತು ವಿಮಾ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News