ಕಲಬುರಗಿ | ಜನಪದ ಸಾಹಿತ್ಯ ಪುರಾತನವಾದದ್ದು: ಮಲ್ಲಿಕಾರ್ಜುನ ಸೇಡಂ

Update: 2024-12-01 10:25 GMT

ಕಲಬುರಗಿ : ಜನಪದ ಸಾಹಿತ್ಯವು ಜನರ ಬಾಯಿಂದ ಬಾಯಿಗೆ ಸಾಗಿ ಬಂದ ಅಧ್ಬುತ ಸಾಹಿತ್ಯವಾಗಿದೆ. ಇದು ಪುರಾತನ ಕಾಲದಿಂದ ಬೆಳೆದು ಬಂದಿದೆ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಮಲ್ಲಿಕಾರ್ಜುನ ಸೇಡಂ ಹೇಳಿದ್ದಾರೆ.

ಚಿತ್ತಾಪುರ ಪಟ್ಟಣದ ಬೆಥನಿ ಪ್ರೌಢಶಾಲೆಯಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಹಮ್ಮಿಕೊಂಡ ʼಶಾಲಾ ಕಾಲೇಜಿಗೊಂದು ಜನಪದ ಕಲರವʼ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಪದ ಕಲೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿಭಿನ್ನವಾಗಿ ಇರುತ್ತದೆ. ಆ ಕಲೆಯಲ್ಲಿ ನಾಡಿನ ವೈಭವ ಪರಂಪರೆ ಅಡಗಿರುತ್ತದೆ. ಜನಪದ ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ಜಾನಪದ ಕಲೆಯನ್ನು ಉಳಿಸಲು ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತಿನ ಗೌರವ ಕಾರ್ಯದರ್ಶಿ ನರಸಪ್ಪ ಚಿನ್ನಾಕಟ್ಟಿ ಅವರು ಉಪನ್ಯಾಸ ನೀಡಿ, ಪಾಶ್ಚಿಮಾತ್ಯ ಸಂಸ್ಕೃತಿಗಿಂತ ನಮ್ಮ ಜನಪದ ಸೊಬಗಿನ ಬಗ್ಗೆ ಇಂದಿನ ವಿದ್ಯಾರ್ಥಿಗಳು ಹೆಚ್ಚು ತಿಳಿದುಕೊಳ್ಳಬೇಕು. ಹಿರಿಯರು ಹೇಳಿದ ಗಾದೆಮಾತುಗಳು, ಒಗಟುಗಳು ಸಂಪ್ರದಾಯ ಬಿಂಬಿಸುವ ಗೀಗೀ ಪದಗಳು, ಮೊಹರಂ ಹಾಡುಗಳು, ಭಜನಾ ಗೀತೆಗಳಲ್ಲಿ ಬದುಕಿಗೆ ಪೂರಕವಾಗುವ ಸಂದೇಶಗಳಿವೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಾಲಾ ಕಾಲೇಜು ಮಕ್ಕಳಲ್ಲಿ ಜನಪದದ ಆಸಕ್ತಿ ಮೂಡಿಸಲು ಮತ್ತು ಸ್ಥಳೀಯ ಕಲಾವಿದರನ್ನು ಶಾಲೆಗಳಿಗೆ ಕರೆದುಕೊಂಡು ಹೋಗಿ ಕಲಾವಿದರಿಂದ ವಿವಿಧ ಕಲೆಗಳ ಪ್ರದರ್ಶನ ಮಾಡಿಸಲಾಗುತ್ತಿದೆ. ಇದರಿಂದ ಕಲೆಯ ಅರಿವು ಮತ್ತು ಕಲಾವಿದರ ಬಗ್ಗೆ ಗೌರವ ಹೆಚ್ಚಿಸುತ್ತದೆ ಎಂದರು.

ಬೆಥನಿ ಪ್ರೌಢಶಾಲೆಯ ಮುಖ್ಯ ಗುರು ಭಗಿನಿ ಕವಿತಾ ಲೋಬೋ ಅಧ್ಯಕ್ಷತೆ ವಹಿಸಿದರು.

ಇದೇ ಸಂದರ್ಭದಲ್ಲಿ ವಿವಿಧ ಕಲೆಗಳ ಪ್ರದರ್ಶನ ನೀಡಿದ ಕಲಾವಿದರಾದ ಮಲ್ಲಯ್ಯಾ ಗುತ್ತೇದಾರ, ವಿಜಯಕುಮಾರ ಲೋಮಟಿ , ಸಿದ್ದು ಸ್ವಾಟಿ, ಶಾಂತಮ್ಮ ಶಿರವಾಟಿ, ನಿರ್ಮಲಾ ಶಿರವಾಟಿ, ಬಸ್ಸಮ್ಮ ಭಾರತಕೊಳ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರಮಾಣ ಪತ್ರ ವಿತರಿಸಲಾಯಿತು.

ಹಿರಿಯ ಸಾಹಿತಿ ಲಿಂಗಣ್ಣ ಮಲ್ಕನ್, ಶ್ವೇತಾ ಪಾಟೀಲ, ಕ.ಸಾ.ಪ ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವ್'ಕರ, ಶಿಕ್ಷಕರಾದ ಶೇಷಪ್ಪ ಬಡಿಗೇರ, ಸಾಬಣ್ಣ ಮಳಖೇಡ ಕರ್, ಶಿಕ್ಷಕಿಯರಾದ ಅರ್ಚನಾ, ಸುಷ್ಮಾ, ನಿಖತ್ ಪರ್ವಿನ್, ಆಶಾರಾಣಿ , ಬಸ್ಸಮ್ಮ, ಶ್ರೀದೇವಿ, ಲಲಿತಾ ಇದ್ದರು.

ದೇವಪ್ಪ ಯರಗಲ್ ಸ್ವಾಗತಿಸಿದರು. ಮಲ್ಲಿಕಾರ್ಜುನ ಮದನ್ ಕರ್ ನಿರೂಪಿಸಿದರು. ವಿಶ್ವನಾಥ ಕುಂಬಾರ ವಂದಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News