ಕಲಬುರಗಿ | ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ಕೊಡಿ : ಪ್ರಮೀಳಾ ಎಂ.ಕೆ.

Update: 2024-11-30 15:50 GMT

ಕಲಬುರಗಿ : ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟು ವಿದ್ಯಾವಂತಳಾಗಿ ಮಾಡಿದರೆ ಮಾತೃಸ್ಥಾನದಲ್ಲಿ ನಿಂತು ಇಡೀ ಕುಟುಂಬಕ್ಕೆ ಮಾದರಿಯಾಗುತ್ತಾಳೆ. ಅದಕ್ಕಾಗಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ನಿರಾಸಕ್ತಿ ಸಲ್ಲದು ಎಂದು ಕಲಬುರಗಿಯ ಜಿಮ್ಸ್ ಆಸ್ಪತ್ರೆಯ ಮುಖ್ಯ ಆಡಳಿತಾಧಿಕಾರಿ ಪ್ರಮೀಳಾ ಎಂ.ಕೆ. ಹೇಳಿದ್ದಾರೆ.

ಕಲಬುರಗಿಯ ಸಿರನೂರು ಸಂತ ಕ್ಸೇವಿಯರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ "ಅವಳರಳಲಿ, ಸಮಾಜ ಬೆಳಗಲಿ" ಎಂಬ ಧ್ಯೇಯ ವಾಕ್ಯದಡಿಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದರು.

ಹೆಣ್ಣು ಮಕ್ಕಳ ಬಗ್ಗೆ ಇರುವ ನಿಷ್ಕಾಳಜಿ ದೂರವಾಗಿ ತಾಯಿ ಸ್ಥಾನದಲ್ಲಿ ನಿಲ್ಲುವ ಹೆಣ್ಣು ಮಗಳು ಇಡೀ ಕುಟುಂಬ ಮತ್ತು ಸಮಾಜಕ್ಕೆ ಆದರ್ಶವಾಗಿ ಉತ್ತಮ ಸಮಾಜದ ನಿರ್ಮಾಣಕ್ಕೆ ಕಾರಣೀಭೂತಳಾಗುತ್ತಾಳೆ. ಹೆಣ್ಣು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಮೂಲಕ ಉತ್ತಮ ವ್ಯವಸ್ಥೆಯನ್ನು ಬಳಸಿಕೊಂಡು ಶಿಕ್ಷಣ ಪಡೆದರೆ ಪ್ರಗತಿ ಹೊಂದಲು ಸಾಧ್ಯ ಎಂದರು.

ಕೇವಲ 69 ಮಕ್ಕಳಿಂದ ಪ್ರಾರಂಭಗೊಂಡ ಸಂತ ಕ್ಸೇವಿಯರ್ ಶಾಲೆ ಶಾಲೆಯು ಐದು ವರ್ಷಗಳಲ್ಲಿ 550ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿ ಗುಣಮಟ್ಟದ ಶಿಕ್ಷಣವನ್ನು ನೀಡುವ ಮೂಲಕ ಆದರ್ಶಪ್ರಾಯ ಕೆಲಸ ಮಾಡುತ್ತಿದೆ ಎಂದು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ವಂದನೀಯ ಮ್ಯಾಕ್ಸಿಮ್ ಮಿಸ್ಕಿತ್ ಎಸ್.ಜೆ., ಉಪ ಪ್ರಾಂಶಪಾಲರಾದ ಶ್ರುತಿ ರೆಡ್ಡಿ, ಸಂಸ್ಥೆಯ ಕೋಶಾಧಿಕಾರಿ ಫಾದರ್ ಆನಂದ ಪ್ರಭು, ಫಾದರ್ ಜಾನ್ ಥಾಮಸ್, ಫಾದರ್ ರೋಷನ್ ಪಿಂಟೊ, ವಾಣಿ, ವಿಮಲ್ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News