ಕಲಬುರಗಿ | ಮಹಿಳಾ ವಿವಿ ಯುವಜನೋತ್ಸವ

Update: 2024-11-30 12:47 GMT

ಕಲಬುರಗಿ: ನ.27ರಿಂದ 29ರವರೆಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಯುವಜನೋತ್ಸವ 19ನೇ ಶಕ್ತಿ ಸಂಭ್ರಮ ಕಾರ್ಯಕ್ರಮದಲ್ಲಿ ನಗರದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಲವು ವಿದ್ಯಾರ್ಥಿನಿಯರ ಮಾಡಿದ ಸಾಧನೆಗೆ ಸಂಸ್ಥೆ ಅಭಿನಂದಿಸಿದೆ.

ಕಾರ್ಯಕ್ರಮದಲ್ಲಿ ನಡೆದಿರುವ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ 45 ವಿದ್ಯಾರ್ಥಿನಿಯರು ಅನೇಕ ಬಹುಮಾನಗಳನ್ನು ಪಡೆದುಕೊಂಡು ಹೈದರಾಬಾದ್ ಕರ್ನಾಟಕ ಸಂಸ್ಥೆ ಮತ್ತು ಕಾಲೇಜಿಗೆ ಕೀರ್ತಿ ತಂದುಕೊಟ್ಟಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಧನೆಗೈದ ವಿದ್ಯಾರ್ಥಿನಿಯರಿಗೂ ಮತ್ತು ಟೀಮ್ ಮ್ಯಾನೇಜರ್ ಆದ ಡಾ.ಸವಿತಾ ಬಿ. ಬೋಳ ಶೆಟ್ಟಿ ಮತ್ತು ಅವರ ಜೊತೆ ನಿಂತು ಸಹಕರಿಸಿದ ದಾನಮ್ಮ ಎಸ್.ಬಿರಾದಾರ, ವೈಷ್ಣವಿ , ಡಾ.ಸುಭಾಷ್ ಚಂದ್ರ ದೊಡ್ಮನಿ, ಡಾ.ವಿಶ್ವನಾಥ್ ದೇವರಮನಿ, ಡಾ.ರೇಣುಕಾ, ಡಾ.ಮುಕ್ಕಿಮಿಯಾ, ಡಾ.ಮಹೇಶ್ ಕುಮಾರಗವರ್, ಡಾ.ಪ್ರೇಮ್ ಚಂದ್ ಚವ್ಹಾನ್, ಸಿದ್ದು ದೇವರಮನಿ ಮತ್ತು ಬೋಧಕೇತರ ಸಿಬ್ಬಂದಿ ವರ್ಗಕ್ಕೆ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶಿಲ್ ಜಿ ನಮೋಶಿ ಅವರು ಅಭಿನಂದನೆಗಳು ಸಲ್ಲಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಸಾಧನೆಗೆ ಆಡಳಿತ ಮಂಡಳಿಯ ಸದಸ್ಯರು ಮತ್ತು ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ರಾಜೇಂದ್ರ ಕೊಂಡ ಅವರು ಅಭಿನಂದಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News