ಜೇನು ನೊಣಗಳನ್ನು ಕೀಟನಾಶಕಗಳಿಂದ ರಕ್ಷಿಸುವ ಆಹಾರ ಅಭಿವೃದ್ದಿಪಡಿಸಿದ ಕೊಲಂಬಿಯಾ ವಿಜ್ಞಾನಿಗಳು

Update: 2024-10-20 14:53 GMT

ಸಾಂದರ್ಭಿಕ ಚಿತ್ರ

ಕೊಲಂಬಿಯ : ಜೇನು ನೊಣಗಳ ಮೆದುಳನ್ನು ಕೀಟನಾಶಕಗಳಿಂದ ರಕ್ಷಿಸುವ ಹೊಸ ಪೂರಕ ಆಹಾರವನ್ನು ಅಭಿವೃದ್ಧಿಪಡಿಸಿರುವುದಾಗಿ ಕೊಲಂಬಿಯಾದ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಜೇನು ನೊಣಗಳು ಪರಾಗಸ್ಪರ್ಶ, ನೈಸರ್ಗಿಕ ಪರಿಸರ ವ್ಯವಸ್ಥೆಗಳ ಸಂರಕ್ಷಣೆ ಮತ್ತು ಆಹಾರ ಉತ್ಪಾದನೆಗೆ ಅಗತ್ಯವೆಂದು ಪರಿಗಣಿಸಲಾಗಿದೆ. ಪೂರಕ ಆಹಾರವು ಜೇನು ನೊಣಗಳ ಮೆದುಳಿಗೆ ಕೃಷಿ ರಾಸಾಯನಿಕಗಳಿಂದ ಉಂಟಾಗುವ ನರವೈಜ್ಞಾನಿಕ ಹಾನಿಯಿಂದ ಸುರಕ್ಷಿತವಾಗಿರಿಸುತ್ತದೆ ಎಂದು ಹೇಳಲಾಗಿದೆ.

ಬೊಗೋಟಾದಲ್ಲಿನ ಕೊಲಂಬಿಯಾದ ಖಾಸಗಿ ರೊಸಾರಿಯೊ ವಿಶ್ವವಿದ್ಯಾನಿಲಯದಲ್ಲಿ, ಅರಿಝೋನಾ ಮತ್ತು ಯೂನಿವರ್ಸಿಡಾಡ್ ಜವೇರಿಯಾನ ವಿಶ್ವವಿದ್ಯಾನಿಲಯದ ನರವಿಜ್ಞಾನ ವಿಭಾಗದ ಸಹಭಾಗಿತ್ವದಲ್ಲಿ ಪೂರಕ ಆಹಾರವನ್ನು ಅಭಿವೃದ್ಧಿಪಡಿಸಲಾಗಿದೆ. ಕೀಟನಾಶಕಗಳಿಗೆ ಒಡ್ಡಿಕೊಂಡಾಗ ಜೇನು ನೊಣಗಳು ಎದುರಿಸುವ ಸಮಸ್ಯೆಗೆ ಇದು ಪೌಷ್ಟಿಕಾಂಶಯುತವಾದ ಪರಿಹಾರವಾಗಿದೆ ಎಂದು ರೊಸಾರಿಯೊ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಆಂಡ್ರೆ ರಿವೇರೋಸ್ ಹೇಳಿದ್ದಾರೆ.

ವಿಜ್ಞಾನಿಗಳು ಆಹಾರವನ್ನು ಅಭಿವೃದ್ಧಿಪಡಿಸುವ ವೇಳೆ ಜೇನು ನೊಣಗಳಿಗೆ ಆಹಾರವನ್ನು ನೀಡಿದ್ದಾರೆ. ಅಭಿವೃದ್ದಿಪಡಿಸಲಾದ ಪೂರಕ ಆಹಾರದಲ್ಲಿ ಜೇನು ನೊಣಗಳ ಆರೋಗ್ಯವನ್ನು ಸುಧಾರಿಸುವ ಅಣುಗಳಿವೆ, ಕೀಟನಾಶಕಗಳಿಂದ ಜೇಣು ನೊಣಗಳಿಗೆ ಉಂಟಾಗುವ ನರಕೋಶದ ಹಾನಿಯನ್ನು ತಡೆಯುವ ಅಣುಗಳಿವೆ ಎಂದು ಜುವಾನ್ ಜೋಸ್ ಓವಾಲೆ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News