ಅರ್ಜುನ ಪ್ರಶಸ್ತಿ ಸ್ವೀಕರಿಸಿದ ಕ್ರಿಕೆಟಿಗ ಮುಹಮ್ಮದ್ ಶಮಿ
ದಿಲ್ಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾರತದ ವೇಗದ ಬೌಲರ್ ಮುಹಮ್ಮದ್ ಶಮಿ ಅವರಿಗೆ ಇಂದು ಅರ್ಜುನ ಪ್ರಶಸ್ತಿ ಪ್ರದಾನ ಮಾಡಿದರು. ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮುಹಮ್ಮದ್ ಶಮಿ ಅವರ ಹೆಸರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.
ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್ ಗಳನ್ನು ಕಬಳಿಸುವ ಮೂಲಕ ಶಮಿ ತಮ್ಮ ಏಕದಿನ ವಿಶ್ವಕಪ್ 2023 ಯಾತ್ರೆ ಅನ್ನು ಯಶಸ್ವಿಯಾಗಿ ಮುಗಿಸಿದ್ದರು.
“ಈ ಪ್ರಶಸ್ತಿಯು ನನ್ನ ಕನಸಾಗಿತ್ತು. ಹಲವಾರು ಮಂದಿ ತಮ್ಮ ಜೀವಿತಾವಧಿ ಮುಗಿಸಿದರೂ ಈ ಪ್ರಶಸ್ತಿ ಪಡೆಯಲು ಸಾಧ್ಯವಾಗುವುದಿಲ್ಲ. ಈ ಪ್ರಶಸ್ತಿಗೆ ನನ್ನನ್ನು ನಾಮಕರಣ ಮಾಡಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ಪ್ರಶಸ್ತಿ ಪ್ರದಾನ ಸಮಾರಂಭದ ಪ್ರಾರಂಭಕ್ಕೂ ಮುನ್ನ ಮುಹಮ್ಮದ್ ಶಮಿ ಸಂತಸ ವ್ಯಕ್ತಪಡಿಸಿದರು.
ಮುಹಮ್ಮದ್ ಶಮಿ ಅವರು ವಿಶ್ವಕಪ್ ಕ್ರೀಡಾಕೂಟದ ಆರಂಭಿಕ ನಾಲ್ಕು ಪಂದ್ಯಗಳಿಂದ ಆಡುವ ಹನ್ನೊಂದು ಮಂದಿ ತಂಡದಿಂದ ಹೊರಗಿದ್ದರು. ಆದರೆ, ಹಾರ್ದಿಕ್ ಪಾಂಡ್ಯ ಗಾಯಾಳುವಾಗಿದ್ದರಿಂದ ಶಮಿ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ದೊರೆತಿತ್ತು. ತಮ್ಮ ಮೊದಲ ಪಂದ್ಯದಲ್ಲೇ ನ್ಯೂಝಿಲೆಂಡ್ ತಂಡದ ವಿರುದ್ಧ 5 ವಿಕೆಟ್ ಗಳನ್ನು ಕಿತ್ತು ಶಮಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದರು. ಅಲ್ಲಿಂದಾಚೆಗೆ ಶಮಿ ದಾಖಲೆಯ ಓಟ ಓಡಿದರು. ಕೇವಲ ಏಳು ಪಂದ್ಯಗಳಿಂದ 24 ವಿಕೆಟ್ ಗಳನ್ನು ಪಡೆದು ಮಿಂಚಿದ್ದರು.
2023ರ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಾರಣಕ್ಕೆ ಒಟ್ಟು 26 ಮಂದಿ ಅಥ್ಲೀಟ್ ಗಳು ಅರ್ಜುನ ಪ್ರಶಸ್ತಿ ಸ್ವೀಕರಿಸಿದರು.
#WATCH | Delhi: Mohammed Shami received the Arjuna Award from President Droupadi Murmu at the National Sports Awards. pic.twitter.com/znIqdjf0qS
— ANI (@ANI) January 9, 2024