ಕಾಂಗ್ರೆಸ್ ಜತೆ ಎನ್ ಸಿಪಿ ವಿಲೀನ ಇಲ್ಲ: ಪವಾರ್ ಸ್ಪಷ್ಟನೆ

Update: 2024-05-10 07:48 IST
ಕಾಂಗ್ರೆಸ್ ಜತೆ ಎನ್ ಸಿಪಿ ವಿಲೀನ ಇಲ್ಲ: ಪವಾರ್ ಸ್ಪಷ್ಟನೆ

ಶರದ್‌ ಪವಾರ್‌ Photo: PTI

  • whatsapp icon

ಕೊಲ್ಲಾಪುರ: ಕಾಂಗ್ರೆಸ್ ಜತೆ ಎನ್ ಸಿಪಿ ವಿಲೀನಗೊಳಿಸಲಾಗುತ್ತದೆ ಎಂಬ ಬಗ್ಗೆ ಎಂದೂ ಹೇಳಿಕೆ ನೀಡಿಲ್ಲ ಎಂದು ಎನ್ ಸಿಪಿ ಮುಖಂಡ ಶರದ್ ಪವಾರ್ ಸ್ಪಷ್ಟಪಡಿಸಿದ್ದಾರೆ.

ಸತಾರಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಬಳಿಕ ಎನ್ ಸಿಪಿಯನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸಲಾಗುತ್ತದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿ, "ಮೀ ಅಸಾ ಬೊಲಾಲೋ ನಹಿ, ಮೀ ಅಸಾ ಬೊಲಾಲೋ ನಹಿ" ಎಂದು ಸ್ಪಷ್ಟಪಡಿಸಿದರು.

ಎನ್ ಸಿಪಿ ಹಾಗೂ ಕಾಂಗ್ರೆಸ್ 2001ರಿಂದೀಚೆಗೂ ಜತೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸಚಿವ ಸಂಪುಟದಲ್ಲಿ ಕೂಡಾ ಜತೆಗಿದ್ದೆವು. ಜಂಟಿಯಾಗಿ ಚುನಾವಣೆಯನ್ನೂ ಎದುರಿಸಿದ್ದೆವು. ತತ್ವ ಸಿದ್ಧಾಂತ ಒಂದೇ ಆಗಿರುವುದರಿಂದ ಜತೆಯಾಗಿ ಕಾರ್ಯನಿರ್ವಹಿಸುವುದು ಮುಖ್ಯ ಎಂದು ನಾವು ಭಾವಿಸಿದ್ದೇವೆ ಎಂದು ಹೇಳಿದ್ದಾಗಿ ತಿಳಿಸಿದರು.

ಇದಕ್ಕೂ ಮುನ್ನ ಪ್ರಾದೇಶಿಕ ಪಕ್ಷಗಳನ್ನು ಕಾಂಗ್ರೆಸ್ ಜತೆ ವಿಲೀನಗೊಳಿಸುವ ಸಾಧ್ಯತೆಗಳ ಬಗ್ಗೆ ಪತ್ರಿಕಾ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ ಪವಾರ್, "ಎಲ್ಲ ಪ್ರಾದೇಶಿಕ ಪಕ್ಷಗಳಲ್ಲ. ಕೆಲ ಪಕ್ಷಗಳು ಕಾಂಗ್ರೆಸ್ ನ ತತ್ವಸಿದ್ಧಾಂತಕ್ಕೆ ನಿಕಟವಾಗಿವೆ. ಉದಾಹರಣೆಗೆ ನನ್ನ ಎನ್ ಸಿಪಿ, ಆರಂಭದಿಂದಲೂ ಎನ್ ಸಿಪಿ ಹಾಗೂ ಕಾಂಗ್ರೆಸ್ ಜತೆಯಾಗಿ ಕಾರ್ಯನಿರ್ವಹಿಸುತ್ತಿವೆ. ಎರಡೂ ಪಕ್ಷಗಳಿಗೆ ತತ್ವ ಸಿದ್ಧಾಂತ ಗಾಂಧಿ ಹಾಗೂ ನೆಹರೂ ಅವರ ತತ್ವ ಸಿದ್ಧಾಂತಗಳು. ನಿಕಟವಾಗಿ ಕಾರ್ಯನಿರ್ವಹಿಸುವುದು ಹೆಚ್ಚಿದಾಗ ವಿಲೀನ ಅಚ್ಚರಿಯಲ್ಲ" ಎಂದು ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News