ಸಂಸದ ಸ್ಥಾನ ಮರುಸ್ಥಾಪನೆಗೊಂಡ ಬೆನ್ನಲ್ಲೇ ಟ್ವಿಟರ್ ಬಯೋ ಬದಲಿಸಿದ ರಾಹುಲ್ ಗಾಂಧಿ

Update: 2023-08-07 12:43 GMT

ಹೊಸದಿಲ್ಲಿ: ತಮ್ಮ ಸಂಸದ ಸ್ಥಾನ ಮರುಸ್ಥಾಪನೆಗೊಂಡ ನಂತರ ರಾಹುಲ್ ಗಾಂಧಿಯವರಿಂದು ತಮ್ಮ ಟ್ವಿಟರ್ ಬಯೋ(ಸ್ವವಿವರ)ದಲ್ಲಿ 'ಲೋಕಸಭಾ ಸದಸ್ಯ' ಎಂದು ವಿವರವನ್ನು ಪರಿಷ್ಕರಿಸಿದ್ದಾರೆ. ರಾಹುಲ್ ಗಾಂಧಿ ಅವರ ಟ್ವಿಟರ್ ಬಯೋದಲ್ಲಿ ಈ ಹಿಂದೆ 'ಅನರ್ಹಗೊಂಡ ಸಂಸದ' ಎಂದು ನಮೂದಿಸಲಾಗಿತ್ತು. ಮೋದಿ ಉಪನಾಮದ ಕುರಿತು ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ದಾಖಲಾಗಿದ್ದ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಅವರನ್ನು ಕೆಳ ಹಂತದ ನ್ಯಾಯಾಲಯವು ದೋಷಿ ಎಂದು ತೀರ್ಪಿತ್ತು, ಎರಡು ವರ್ಷಗಳ ಸೆರೆವಾಸ ಶಿಕ್ಷೆ ವಿಧಿಸಿದ್ದರಿಂದ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ರಾಹುಲ್ ಗಾಂಧಿಯವರ ಈಗಿನ ಟ್ವಿಟರ್ ಬಯೋ, "ಇದು ರಾಹುಲ್ ಗಾಂಧಿಯವರ ಅಧಿಕೃತ ಖಾತೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯ. ಲೋಕಸಭಾ ಸದಸ್ಯ" ಎಂದು ನಮೂದಿಸಲಾಗಿದೆ.

ಮೋದಿ ಉಪನಾಮ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ವಿಧಿಸಿದ್ದ ಶಿಕ್ಷೆಗೆ ಶುಕ್ರವಾರ ಸುಪ್ರೀಂಕೋರ್ಟ್ ತಡೆ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News