ʼಹಿಂದುತ್ವʼದ ಬದಲಿಗೆ 'ಭಾರತೀಯ ಸಂವಿಧಾನತ್ವ' ಪದ ಬಳಕೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್
Update: 2024-10-21 06:58 GMT
ಹೊಸದಿಲ್ಲಿ: ʼಹಿಂದುತ್ವʼದ ಬದಲಿಗೆ 'ಭಾರತೀಯ ಸಂವಿಧಾನತ್ವ' ಪದ ಬಳಕೆಗೆ ಕೋರಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಅರ್ಜಿ ಬಗ್ಗೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಇಲ್ಲ, ನಾವು ಇದನ್ನು ಪರಿಗಣಿಸುವುದಿಲ್ಲ. ಇದು ನ್ಯಾಯಾಲಯದ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗವಾಗಿದೆ ಎಂದು ಅರ್ಜಿದಾರರಾದ ಡಾ.ಎಸ್ಎನ್ ಕುಂದ್ರಾ ಅವರಿಗೆ ಹೇಳಿದ್ದಾರೆ.
ಸಿಜೆಐ ಡಿವೈ ಚಂದ್ರಚೂಡ್, ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಕುರಿತ ಅರ್ಜಿಯನ್ನು ವಜಾಗೊಳಿಸಿದೆ.