ಟಿಎಂಸಿ ರಾಜ್ಯಸಭಾ ಅಭ್ಯರ್ಥಿ ಸಾಕೇತ್ ಗೋಖಲೆ ಯಾರು?; ಇಲ್ಲಿದೆ ಮಾಹಿತಿ

Update: 2023-07-10 11:36 GMT

ಹೊಸದಿಲ್ಲಿ : ಮುಂಬರುವ ರಾಜ್ಯಸಭಾ ಚುನಾವಣೆಗಳಿಗೆ ಪಶ್ಚಿಮ ಬಂಗಾಳದದಿಂದ ತೃಣಮೂಲ ಕಾಂಗ್ರೆಸ್ ಪಕ್ಷ ಘೋಷಿಸಿದ ಅಭ್ಯರ್ಥಿಗಳಲ್ಲಿ ಪ್ರಮುಖ ಹೆಸರು ಸಾಕೇತ್ ಗೋಖಲೆಯವರದ್ದಾಗಿದೆ. ಮಾಹಿತಿ ಹಕ್ಕು ಕಾರ್ಯಕರ್ತರೂ ಟಿಎಂಸಿಯ ವಕ್ತಾರರೂ ಆಗಿರುವ ಸಾಕೇತ್ ಗೋಖಲೆ ಅವರನ್ನು ಟಿಎಂಸಿ ರಾಜ್ಯಸಭಾ ಚುನಾವಣೆಗೆ ತನ್ನ ಅಭ್ಯರ್ಥಿಯನ್ನಾಗಿ ಆರಿಸಿರುವುದು ಸಾಕಷ್ಟು ವಿವಾದಕ್ಕೂ ಈಡಾಗಿದೆ.

2021ರಲ್ಲಿ ಟಿಎಂಸಿ ಸೇರಿದ್ದ ಸಾಕೇತ್ ಗೋಖಲೆ ಅದಕ್ಕಿಂತ ಮುಂಚೆ ಫೈನಾನ್ಶಿಯಲ್ ಟೈಮ್ಸ್, ಹಿಂದುಸ್ತಾನ್ ಟೈಮ್ಸ್ ಸಹಿತ ಪ್ರಮುಖ ಸುದ್ದಿ ಸಂಸ್ಥೆಗಳಿಗೆ ಕಾರ್ಯನಿರ್ವಹಿಸಿದ್ದರು.

ಆದರೆ RTI ಕಾರ್ಯಕರ್ತರಾಗಿ ವಿವಿಧ ರಾಜಕೀಯ ಸಾಮಾಜಿಕ ವಿಷಯಗಳನ್ನು ಕೈಗೆತ್ತಿಕೊಂಡು ನಡೆಸಿದ ಹೋರಾಟದಿಂದಲೇ ಅವರು ಸುದ್ದಿಯಾಗಿದ್ದರು.

ತಮ್ಮ RTI ಅರ್ಜಿಗಳ ಮೂಲಕ ಹಲವು ಪ್ರಮುಖ ವಿಚಾರಗಳನ್ನು ಅನಾವರಣಗೊಳಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಆದರೆ ಡಿಸೆಂಬರ್ 2022ರಲ್ಲಿ ಅವರು ಮೊರ್ಬಿ ಸೇತುವೆ ದುರಂತದ ಕುರಿತಂತೆ ತಪ್ಪು ಮಾಹಿತಿ ನೀಡಿ ಮಾಡಿದ್ದರೆನ್ನಲಾದ ಟ್ವೀಟ್‍ಗೆ ಸಂಬಂಧಿಸಿದಂತೆ ಬಂಧಿತರಾಗಿದ್ದರು. ಈ ಪ್ರಕರಣದಲ್ಲಿ ಅವರು ಅಹ್ಮದಾಬಾದ್‍ನ ಮೆಟ್ರೋಪಾಲಿಟನ್ ನ್ಯಾಯಾಲಯದಿಂದ ಜಾಮೀನು ಪಡೆದರೂ ಕೆಲವೇ ಗಂಟೆಗಳ ನಂತರ ಮತ್ತದೇ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಕೊನೆಗೆ ಡಿಸೆಂಬರ್ 10ರಂದು ಅವರಿಗೆ ಜಾಮೀನು ದೊರಕಿತ್ತು.

ಜನವರಿ 2023ರಲ್ಲಿ ಗೋಖಲೆ ಮತ್ತೆ ಕಾನೂನಾತ್ಮಕ ಸಮಸ್ಯೆ ಎದುರಿಸಿದ್ದರು. ಈ ಬಾರಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು. ಮೇ ತಿಂಗಳಲ್ಲಿ ಅವರಿಗೆ ಈ ಪ್ರಕರಣದಲ್ಲಿ ಜಾಮೀನು ದೊರಕಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News