ಪೋಷಕರ ವಿರೋಧದಿಂದ ಮದುವೆ ಆಶ್ವಾಸನೆ ಮುರಿದರೆ ಅತ್ಯಾಚಾರವಲ್ಲ: ಹೈಕೋರ್ಟ್

Update: 2024-02-03 02:18 GMT

ನಾಗ್ಪುರ: ಪೋಷಕರ ವಿರೋಧದ ಕಾರಣದಿಂದ ಒಬ್ಬ ವ್ಯಕ್ತಿ ತಾನು ನೀಡಿದ ವಿವಾಹದ ಭರವಸೆಯಿಂದ ಹಿಂದಕ್ಕೆ ಸರಿದರೆ ಅವರ ಸಂಬಂಧ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ಮುಂಬೈ ಹೈಕೋರ್ಟ್ ನ ನಾಗ್ಪುರ ಪೀಠ ತೀರ್ಪು ನೀಡಿದೆ. ವಿವಾಹದ ಆಮಿಷವೊಡ್ಡಿ ಅತ್ಯಾಚಾರ ಎಸಗಲಾಗಿದೆ ಎಂದು ಆಪಾದಿಸಿ ಮಹಿಳೆಯೊಬ್ಬರು ದಾಖಲಿಸಿದ ದೂರಿನ ವಿಚಾರಣೆ ನಡೆಸಿ 31 ವರ್ಷದ ವ್ಯಕ್ತಿಯನ್ನು ದೋಷಮುಕ್ತಗೊಳಿಸಿದೆ.

ಇವರ ಸಂಬಂಧದ ಆರಂಭದಿಂದ ಸಂತ್ರಸ್ತೆಯನ್ನು ವಿವಾಹವಾಗುವ ಉದ್ದೇಶ ಈ ವ್ಯಕ್ತಿಗೆ ಇರಲಿಲ್ಲ ಹಾಗೂ ತನ್ನ ಆಸೆಯನ್ನು ಪೂರೈಸಿಕೊಳ್ಳಲು ಈ ಸುಳ್ಳು ಭರವಸೆ ನೀಡಲಾಗಿದೆ ಎಂದು ಸಾಬೀತುಪಡಿಸುವ ಯಾವ ದಾಖಲೆಗಳೂ ಇಲ್ಲ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಅರ್ಜಿದಾರರು ವಿವಾಹವಾಗಲು ಸಿದ್ಧರಿದ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿತ್ತು.

ಪೋಷಕರು ಒಪ್ಪಿಗೆ ನೀಡದ ಏಕೈಕ ಕಾರಣದಿಂದ ಈ ವ್ಯಕ್ತಿ ವಿವಾಹ ಪ್ರಸ್ತಾವನೆಯಿಂದ ಹಿಂದಕ್ಕೆ ಸರಿದಿದ್ದಾರೆ. ಇದು ಭಾರತೀಯ ದಂಡಸಂಹಿತೆಯ ಸೆಕ್ಷನ್ 375 (ಮಹಿಳೆಯ ಒಪ್ಪಿಗೆ ಇಲ್ಲದೇ ಆಕೆಯ ಜತೆ ಸಂಭೋಗ ನಡೆಸುವ ಅಪರಾಧ) ವ್ಯಾಪ್ತಿಗೆ ಬರುವ ಅಪರಾಧವಾಗುವುದಿಲ್ಲ ಎಂದು ನ್ಯಾಯಮೂರ್ತಿ ಮಹೇಂದ್ರ ಚಂದ್ವಾನಿ ಅಭಿಪ್ರಾಯಪಟ್ಟಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News