ಪ್ರಧಾನಿ ಮೋದಿ ‘ಮನ್ ಕಿ ಬಾತ್’ ಪ್ರಭಾವದ ಕುರಿತು ಅಧ್ಯಯನವನ್ನು ಹಂಚಿಕೊಂಡಿರುವ ಬಗ್ಗೆ ನಮಗೆ ಮಾಹಿತಿಯಿಲ್ಲ: ಐಐಎಂ ಬೆಂಗಳೂರು

Update: 2023-11-03 14:15 GMT

Photo- PTI 

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ ಪ್ರಭಾವದ ಕುರಿತು ಅಧ್ಯಯನದ ವಿವರಗಳನ್ನು ಪೋಸ್ಟ್ ಮಾಡಿದ ತಿಂಗಳ ಬಳಿಕ ಆರ್‌ಟಿಐ ಅರ್ಜಿಯೊಂದಕ್ಕೆ ಉತ್ತರವು, ಇಂತಹ ಅಧ್ಯಯನವು ನಡೆದಿರಲಿಕ್ಕಿಲ್ಲ ಎಂದು ಸೂಚಿಸಿದೆ ಎಂದು thenewsminute.com ವರದಿ ಮಾಡಿದೆ.

ಎಸ್‌ಬಿಐ ಮತ್ತು ಐಐಎಂ-ಬೆಂಗಳೂರು ಈ ಅಧ್ಯಯನವನ್ನು ನಡೆಸಿದ್ದವು ಎಂದು ಮೋದಿ ತನ್ನ ರೇಡಿಯೊ ಕಾರ್ಯಕ್ರಮದ ಒಂಭತ್ತನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅ.3ರಂದು ಬರೆದಿದ್ದ ಪೋಸ್ಟ್‌ನಲ್ಲಿ ತಿಳಿಸಿದ್ದರು.

ಆರ್‌ಟಿಐ ಅರ್ಜಿಗೆ ನೀಡಿರುವ ಉತ್ತರದಲ್ಲಿ ಐಐಎಂ-ಬೆಂಗಳೂರು, ಇಂತಹ ಮಾಹಿತಿ ದಾಖಲೆಯಲ್ಲಿ ಲಭ್ಯವಿಲ್ಲ ಎಂದು ತಿಳಿಸಿದೆ.

ಮೋದಿ ‘ಮನ್ ಕಿ ಬಾತ್‌ನ ಪರಿವರ್ತನೀಯ ಪರಿಣಾಮ: ಎಸ್‌ಬಿಐ ಮತ್ತು ಐಐಎಂ ಬೆಂಗಳೂರು ನಡೆಸಿದ ವಿಶ್ಲೇಷಣೆ ’ ಶೀರ್ಷಿಕೆಯ ದಾಖಲೆಯನ್ನು ಹಂಚಿಕೊಂಡಿದ್ದರು. ಬೇಟಿ ಬಚಾವೊ ಬೇಟಿ ಪಢಾವೊ, ಯೋಗ ಮತ್ತು ಖಾದಿಯ ಪ್ರಚಾರ ಹಾಗೂ ಸಿರಿಧಾನ್ಯಗಳ ಬಳಕೆಯಂತಹ ಕೇಂದ್ರ ಸರಕಾರದ ವಿವಿಧ ಯೋಜನೆಗಳು ರೇಡಿಯೊ ಕಾರ್ಯಕ್ರಮದ ಮೂಲಕ ಜನಪ್ರಿಯತೆಯನ್ನು ಗಳಿಸಿವೆ ಎಂದು ಅಧ್ಯಯನವು ಉಲ್ಲೇಖಿಸಿತ್ತು.

ಆದರೆ ಶೀರ್ಷಿಕೆ ಮತ್ತು ಅಧ್ಯಯನದ ದಿನಾಂಕ, ಅದಕ್ಕಾಗಿ ವ್ಯಯಿಸಲಾದ ಹಣ, ಎಸ್‌ಬಿಐ ಜೊತೆಗಿನ ಒಪ್ಪಂದ ಮತ್ತು ಇಂತಹ ಇತರ ವಿವರಗಳ ಕುರಿತು ಆರ್‌ಟಿಐ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗಳಿಗೆ ಐಐಎಂ-ಬೆಂಗಳೂರು,ತನ್ನ ಬಳಿ ದಾಖಲೆಯಲ್ಲಿ ಯಾವುದೇ ಮಾಹಿತಿಯಿಲ್ಲ ಎಂದು ಉತ್ತರಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News